ADVERTISEMENT

ಸ್ವಚ್ಛತೆ ಜೀವನದ ಮೊದಲ ಆದ್ಯತೆಯಾಗಲಿ: ಶಿಕ್ಷಕ ಸಂತೋಷ ಬಂಡೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2024, 16:00 IST
Last Updated 10 ಆಗಸ್ಟ್ 2024, 16:00 IST
ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಶಿಕ್ಷಕ ಸಂತೋಷ ಬಂಡೆ ಚಾಲನೆ ನೀಡಿದರು
ಇಂಡಿ ತಾಲ್ಲೂಕಿನ ಹಿರೇರೂಗಿ ಗ್ರಾಮದ ಶಾಲೆಯಲ್ಲಿ ಆಯೋಜಿಸಿದ್ದ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಶಿಕ್ಷಕ ಸಂತೋಷ ಬಂಡೆ ಚಾಲನೆ ನೀಡಿದರು   

ಇಂಡಿ: ಭಾರತದಲ್ಲಿ ಪ್ರಾಚೀನ ಕಾಲದಿಂದಲೂ ಕೈ ಕಾಲು ತೊಳೆಯುವ ಪರಿಪಾಠವಿದೆ. ವೈಯಕ್ತಿಕ ಹಾಗೂ ಸುತ್ತಲಿನ ಸ್ಥಳವನ್ನು ಸ್ವಚ್ಛವಾಗಿಟ್ಟುಕೊಂಡಲ್ಲಿ ಸಾಂಕ್ರಾಮಿಕ ರೋಗಗಳಿಂದ ಮುಕ್ತವಾಗಲು ಸಾಧ್ಯ. ಮಕ್ಕಳು ವಿದ್ಯಾರ್ಥಿ ಜೀವನದಲ್ಲಿಯೇ ಸ್ವಚ್ಛತೆಯ ಮಹತ್ವ ತಿಳಿದು ಮುನ್ನಡೆಯಬೇಕು ಎಂದು ಶಿಕ್ಷಕ ಸಂತೋಷ ಬಂಡೆ ಹೇಳಿದರು.

ತಾಲ್ಲೂಕಿನ ಹಿರೇರೂಗಿ ಗ್ರಾಮದ ಕೆಬಿಎಸ್, ಕೆಜಿಎಸ್, ಯುಬಿಎಸ್ ಶಾಲೆಯಿಂದ ಶನಿವಾರ ಹಮ್ಮಿಕೊಂಡಿದ್ದ ಕೈ ತೊಳೆಯುವ ಹಾಗೂ ಸ್ವಚ್ಛತಾ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಇತ್ತೀಚಿನ ವರದಿಯ ಪ್ರಕಾರ ಕೈಯ ಅಸುರಕ್ಷತೆಯಿಂದ ಪ್ರತೀ ವರ್ಷ ಸುಮಾರು 3.5 ಮಿಲಿಯನ್ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಡಯೇರಿಯಾ ಹಾಗೂ ನ್ಯುಮೋನಿಯಾದಂತಹ ಕಾಯಿಲೆಗಳು ಕೈ ತೊಳೆಯದೆ ಆಹಾರ ಸೇವಿಸುವುದರಿಂದ ಬರುತ್ತದೆ. ಹೀಗಾಗಿ ಕಾಯಿಲೆ ಬರುವ ಮುನ್ನವೇ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು ಎಂದು ಹೇಳಿದರು.

ADVERTISEMENT

ಮುಖ್ಯ ಶಿಕ್ಷಕಿ ವಿ.ವೈ. ಪತ್ತಾರ, ಮುಖ್ಯ ಶಿಕ್ಷಕ ಅನಿಲ ಪತಂಗಿ ಮಾತನಾಡಿದರು. ಶಿಕ್ಷಕರಾದ ಎಸ್.ಎಂ. ಪಂಚಮುಖಿ, ಎಸ್.ಡಿ. ಬಿರಾದಾರ, ಎಸ್.ಪಿ. ಪೂಜಾರಿ, ಎನ್.ಬಿ. ಚೌಧರಿ, ಜೆ.ಸಿ. ಗುಣಕಿ, ಎಸ್.ಎನ್. ಡಂಗಿ, ಯಲ್ಲಮ್ಮ ಸಾಲೋಟಗಿ, ಪ್ರಜ್ವಲ ಕುಲಕರ್ಣಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.