ADVERTISEMENT

ಸ್ಪರ್ಧಾತ್ಮಕ ತರಬೇತಿ ಮುದ್ದೇಬಿಹಾಳದಲ್ಲೂ ಆರಂಭ: ಎಚ್.ಬಿ.ವಾಲೀಕಾರ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 14:28 IST
Last Updated 19 ಜೂನ್ 2025, 14:28 IST
ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪದವಿ ಕಾಲೇಜಿನಲ್ಲಿ ಸಂಯೋಜಿತ ಪದವಿಗಳ ಕುರಿತ ಎರಡು ದಿನದ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಧಾರವಾಡ ಕವಿವಿ ಮಾಜಿ ಕುಲಪತಿ ಎಚ್.ಬಿ.ವಾಲೀಕಾರ ಮಾತನಾಡಿದರು.
ಮುದ್ದೇಬಿಹಾಳ ಪಟ್ಟಣದ ಅಭ್ಯುದಯ ಪದವಿ ಕಾಲೇಜಿನಲ್ಲಿ ಸಂಯೋಜಿತ ಪದವಿಗಳ ಕುರಿತ ಎರಡು ದಿನದ ಕಾರ್ಯಾಗಾರ ಉದ್ಘಾಟನೆ ಕಾರ್ಯಕ್ರಮದಲ್ಲಿ ಧಾರವಾಡ ಕವಿವಿ ಮಾಜಿ ಕುಲಪತಿ ಎಚ್.ಬಿ.ವಾಲೀಕಾರ ಮಾತನಾಡಿದರು.   

ಮುದ್ದೇಬಿಹಾಳ: ‘ಮುದ್ದೇಬಿಹಾಳದ ಅಭ್ಯುದಯ ಪದವಿ ಕಾಲೇಜಿನಲ್ಲಿ ಧಾರವಾಡದಲ್ಲಿ ನೀಡುವ ಸ್ಪರ್ಧಾತ್ಮಕ ತರಬೇತಿ ಕೇಂದ್ರದಿಂದ ನೀಡಲಾಗುವ ತರಬೇತಿಯನ್ನು ಹೈಬ್ರಿಡ್ ಕ್ಲಾಸ್ ರೂಂ ಮೂಲಕ ಅನುಷ್ಠಾನಗೊಳಿಸಲಾಗುವುದು’ ಎಂದು ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದ ನಿವೃತ್ತ ಕುಲಪತಿ ಎಚ್.ಬಿ.ವಾಲೀಕಾರ ಹೇಳಿದರು.

ಪಟ್ಟಣದ ಅಭ್ಯುದಯ ಪದವಿ ಕಾಲೇಜಿನಲ್ಲಿ ಸಂಯೋಜಿತ ಪದವಿಗಳ ಕುರಿತು ನಡೆದ ಎರಡು ದಿನದ ಕಾರ್ಯಾಗಾರ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಅಭ್ಯುದಯ ಪದವಿ ಕಾಲೇಜಿನ ಕಾರ್ಯದರ್ಶಿ ಎಂ.ಎನ್.ಮದರಿ ಮಾತನಾಡಿ, ‘ಎಚ್.ಬಿ.ವಾಲೀಕಾರ ಅವರ ಮಾರ್ಗದರ್ಶನದಲ್ಲಿ ಐಎಎಸ್, ಕೆಎಎಸ್, ಪಿಎಸ್‍ಐ, ಪಿಡಿಒ ಮತ್ತಿತರರ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರವನ್ನು ಆರಂಭಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ಧಾರವಾಡ ಸ್ಪರ್ಧಾ ಜೀನಿಯಸ್ ಅಕಾಡೆಮಿ ಸಿದ್ದಣ್ಣ ದಳವಾಯಿ ಮಾತನಾಡಿ, ‘ರಾಜ್ಯದಲ್ಲಿ 2.80 ಲಕ್ಷ ಹುದ್ದೆಗಳು ಖಾಲಿ ಇದ್ದು, 80 ಸಾವಿರ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳುತ್ತಿದೆ. ಇನ್ನುಳಿದ ಹುದ್ದೆಗಳ ನೇಮಕಕ್ಕೆ ಸದ್ಯಕ್ಕೆ ರಾಜ್ಯ ಸರ್ಕಾರದಿಂದ ತಡೆ ನೀಡಿದ್ದು ನ್ಯಾ.ನಾಗಮೋಹನದಾಸ್ ವರದಿ ಬಳಿಕ ನೇಮಕಾತಿ ಅಧಿಸೂಚನೆ ಹೊರಡಿಸುವುದಾಗಿ ತಿಳಿಸಿದ್ದಾರೆ. ಪರಿಶ್ರಮದಿಂದ ಪ್ರಯತ್ನಿಸಿದವರಿಗೆ ಸರ್ಕಾರಿ ಹುದ್ದೆ ದೊರೆಯುವುದು ಕಷ್ಟವೇನಲ್ಲ’ ಎಂದರು.

ದ್ವಿತೀಯ ವರ್ಷದ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚಿನ ಅಂಕ ಗಳಿಸಿದ ಶರಣಬಸು ವಣಕಿಹಾಳ, ಐಶ್ವರ್ಯಾ ಪೂಜಾರಿ, ವಾಣಿಜ್ಯ ವಿಭಾಗದಲ್ಲಿ ಕಾವ್ಯಶ್ರೀ ಬಿರಾದಾರ, ಬಿ.ಎಸ್ಸಿ ಅಗ್ರಿ ಸೀಟು ಪಡೆದುಕೊಂಡ ಮಾಣಿಕ್ಯ ಲಮಾಣಿ, ರತಿಕಾಂತ ಆಕಳವಾಡಿ, ನೀಟ್ ಪರೀಕ್ಷೆಯಲ್ಲಿ 627ನೇ ರ‍್ಯಾಂಕ್‌ ಪಡೆದ ಮಹಾದೇವಿ ಢವಳಗಿ ಅವರನ್ನು ಸನ್ಮಾನಿಸಲಾಯಿತು.

ಪ್ರಾಚಾರ್ಯ ಆರ್.ಎಸ್.ಜಡಿ, ಪಿಯು ಕಾಲೇಜಿನ ಪ್ರಾಚಾರ್ಯ ಎಂ.ಎಂ.ಧನ್ನೂರ, ಧಾರವಾಡ ಎಂ.ಡಿ.ಆರ್.ಎಸ್‍ನ ಶೇಖಪ್ಪ ಮೇಟಿ, ಬಿ.ಜಿ.ಬಿರಾದಾರ ಇದ್ದರು.ಸ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.