ಆಲಮಟ್ಟಿ: ‘ಕ್ರೀಡಾಕೂಟಗಳು ಕಾಟಾಚಾರಕ್ಕೆ ನಡೆಯದೆ, ಪ್ರತಿ ಶಾಲೆಯ ಮಕ್ಕಳು ಕ್ರೀಡಾಕೂಟದಲ್ಲಿ ಭಾಗವಹಿಸಬೇಕು. ಆ ನಿಟ್ಟಿನಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು’ ಎಂದು ಬಸವನಬಾಗೇವಾಡಿ ತಾಲ್ಲೂಕು ದೈಹಿಕ ಶಿಕ್ಷಣಾಧಿಕಾರಿ ಎಸ್.ಎಸ್. ಅವಟಿ ಹೇಳಿದರು.
ಇಲ್ಲಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮಂಗಳವಾರ ಜರುಗಿದ ಆಲಮಟ್ಟಿ ವಲಯದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.
ಮುಖ್ಯ ಶಿಕ್ಷಕ ಬಸವರಾಜ ಯರವಿನತೆಲಿಮಠ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕ ಯು.ವೈ.ಬಶೆಟ್ಟಿ , ಶಿಕ್ಷಕರ ಸಂಘದ ಅಧ್ಯಕ್ಷ ಎಂ.ಎಸ್. ಮುಕಾರ್ತಿಹಾಳ, ಕಾರ್ಯದರ್ಶಿ ಸಲೀಂ ದಡೇದ, ಎಸ್.ಎಂ. ಪಾಟೀಲ, ಎಸ್.ಬಿ. ತಿಮ್ಮಾಪುರ, ಪಿ.ಎಲ್. ಕುಲಕರ್ಣಿ, ಬಿ.ಡಿ. ಚಲವಾದಿ, ಡಿ.ಕೆ. ಪಾಟೀಲ, ಸಿ.ಬಿ. ಚಿಮ್ಮಲಗಿ, ಡಿ.ವೈ. ವಾಲೀಕಾರ, ಎನ್.ಬಿ.ದಾಸರ, ಕೆ.ಎಸ್. ಮಾಳಗೊಂಡ, ಸಿಆರ್ ಪಿಗಳಾದ ಸುರೇಶ ಹುರಕಡ್ಲಿ, ಭಾಷಾಸಾಬ್ ಮನಗೂಳಿ, ಪ್ರಕಾಶ ದೋರನಳ್ಳಿ ಭಾಗವಹಿಸಿದ್ದರು.
ಜಿ.ಸಿ.ದ್ಯಾವಣ್ಣವರ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ವೈಯಕ್ತಿಕ ವಿಭಾಗ ಹಾಗೂ ಗುಂಪು ಪ್ರಶಸ್ತಿಗಳಲ್ಲಿ ಅತ್ಯಧಿಕ ಪ್ರಶಸ್ತಿಗಳನ್ನು ಪಡೆದ ಬೇನಾಳ ಆರ್.ಎಸ್ ಗ್ರಾಮದ ಮಾದರಿ ಪ್ರಾಥಮಿಕ ಶಾಲೆಯು ಸಮಗ್ರ ವೀರಾಗ್ರಣಿ ಪ್ರಶಸ್ತಿ ಪಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.