ಚಡಚಣ: ‘ಮಹಾಕುಂಭ ಮೇಳದಲ್ಲಿ ಸ್ನಾನ ಮಾಡಿದರೆ ಬಡವರ ಹೊಟ್ಟೆ ತುಂಬುತ್ತದೆಯೇ? ಎಂದು ಪ್ರಶ್ನಿಸುವ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಹಿಂಧೂಗಳ ಭಾವನೆಗೆ ಧಕ್ಕೆ ತರುವದಲ್ಲದೇ ಕಾಂಗ್ರೆಸ್ ಪಕ್ಷದ ಹಿಂದೂ ವಿರೋಧ ನೀತಿಯನ್ನು ಎತ್ತಿ ತೋರುತ್ತದೆ’ ಎಂದು ರಾಜ್ಯದ ಮಾಜಿ ಸಚಿವ ಕೆ.ಎಸ್.ಈಸ್ವರಪ್ಪ ಹೇಳೀದರು.
ಸಮೀಪದ ಝಳಕಿ ಗ್ರಾಮದ ಪ್ರವಾಸಿ ಮಂದಿರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಅನ್ಯ ಧರ್ಮಿಯರು ಮೆಕ್ಕಾ, ಮದೀನಾಗಳಿಗೆ, ಕ್ರೈಸ್ತರು ಜೆರ್ಯುಸೆಲಂಗೆ ಹೋದರೆ ಬಡವರ ಹೊಟ್ಟೆ ತುಂಬುತ್ತದೆಯೇ ಎಂದು ಖರ್ಗೆಯವರು ಕೇಳಿದ್ದರೆ ದೇಶ ಹೊತ್ತಿ ಉರಿಯುತ್ತಿತ್ತು. ಹಿಂದುಗಳು ಶಾಂತಿಪ್ರಿಯರು. ಆದರೆ ಅದು ಅವರ ದೌರ್ಬಲ್ಯ ಅಲ್ಲ’ ಎಂದರು.
ಹಿಂದುಳಿದ ವರ್ಗದವರು, ರೈತರು ಹಾಗೂ ಸಾಮಾನ್ಯ ಜನರಿಗೆ ಸಾಮಾಜಿಕ ನ್ಯಾಯ ಒದಗಿಸುವದರೊಂದಿಗೆ, ವಕ್ಫ್ ಕಾನೂನು ವಿರುದ್ಧ ಹೋರಾಟ ನಡೆಸುವ ಉದ್ದೇಶದಿಂದ ಕ್ರಾಂತಿ ವೀರ ಬ್ರಿಗೇಡ್ ಸ್ಥಾಪಿಸಲಾಗುತ್ತಿದೆ’ ಎಂದರು.
ಕ್ರಾಂತಿವೀರ ಬ್ರಿಗೇಡ್ ರಾಜ್ಯ ಸಂಚಾಲಕ ಅಶೋಕ ಒಡೆಯರ, ಮುಖಂಡ ಬಿ.ಡಿ.ಪಾಟೀಲ್, ರಾಮ ಅವಟಿ, ಕಲ್ಲು ಉಟಗಿ, ರಾಹಲ್ ಔರಂಗಬಾದ, ರಾಜು ಗೋರೆ, ಸದಾಶಿವ ಶಿರಶ್ಯಾಡ, ರಾಜಕುಮಾರ ಸಗಾಯಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.