
ರಮೇಶ ಜಿಗಜಿಣಗಿ
ವಿಜಯಪುರ: ರಾಜ್ಯದ ಜನತೆಗೆ ಪ್ರವಾಹ ಮತ್ತು ಅತಿವೃಷ್ಟಿಯಿಂದಾದ ಹಾನಿಗೆ ಪರಿಹಾರದ ಚಿಂತೆಯಾದರೆ ಕಾಂಗ್ರೆಸ್ಸಿಗರಿಗೆ ಮುಖ್ಯಮಂತ್ರಿ ಸ್ಥಾನ, ಮಂತ್ರಿ ಪದವಿಯ ಚಿಂತೆಯಾಗಿದೆ ಎಂದು ಸಂಸದ ರಮೆಶ ಜಿಗಜಿಣಗಿ ಕಿಡಿಕಾರಿದರು.
‘ಜನ ಸಂಕಷ್ಟದಲ್ಲಿದ್ದು ಪರಿಹಾರಕ್ಕೆ ಅಂಗಲಾಚುತ್ತಿದ್ದರೆ ಜನಪ್ರತಿನಿಧಿಗಳು ಅಧಿಕಾರದ ಹಪಹಪಿಗಿಳಿದಿದ್ದಾರೆ. ಇವರ ಕಚ್ಚಾಟ, ಪರಸ್ಪರ ಪೈಪೋಟಿಯಿಂದಾಗಿ ಅಭಿವೃದ್ಧಿ ಪರ ಚರ್ಚೆ, ಜನಪರ ಕಾಳಜಿ, ನೆರವಿನ ನಿರೀಕ್ಷೆಗಳೆಲ್ಲವೂ ಮಣ್ಣುಪಾಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ಆರೋಪಿಸಿದ್ದಾರೆ.
‘ಅತಿವೃಷ್ಟಿ ಹಾಗೂ ಪ್ರವಾಹದಿಂದಾಗಿ ತೊಗರಿ, ಹತ್ತಿ, ಮೆಕ್ಕೆಜೋಳ, ಈರುಳ್ಳಿ ಸೇರಿದಂತೆ ಹಲವು ಬೆಳೆಗಳು ಹಾಳಾಗಿದ್ದು, ರೈತರು ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದಾರೆ. ಹಿಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು, ಸಕಾಲಕ್ಕೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ನಿರೀಕ್ಷೆಯಲ್ಲಿದ್ದಾರೆ. ಆದರೆ ಈ ಸರ್ಕಾರ ಮತ್ತು ಅದರ ಶಾಸಕರು ಇತ್ತ ಗಮನ ಕೊಡದೇ ಅಧಿಕಾರಕ್ಕಾಗಿ ಕಿತ್ತಾಟ ನಡೆಸಿರುವುದು ನಾಚಿಕೆಗೇಡು’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.