ADVERTISEMENT

ಸಂಗೀತ ಸಾಧಕಿಗೆ ಗೌರವ ಡಾಕ್ಟರೇಟ್

ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ 10ನೇ ಘಟಿಕೋತ್ಸವ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2019, 14:40 IST
Last Updated 13 ಫೆಬ್ರುವರಿ 2019, 14:40 IST
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ 10ನೇ ಘಟಿಕೋತ್ಸವದಲ್ಲಿ ಸಂಗೀತ ಕಲಾವಿದೆ ಡಾ.ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು
ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿ.ವಿ.ಯ 10ನೇ ಘಟಿಕೋತ್ಸವದಲ್ಲಿ ಸಂಗೀತ ಕಲಾವಿದೆ ಡಾ.ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಯಿತು   

ವಿಜಯಪುರ:ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವದಲ್ಲಿ, ಸಂಗೀತ ಕ್ಷೇತ್ರದಲ್ಲಿ ಅನುಪಮ ಸಾಧನೆಗೈದಿರುವ ಧಾರವಾಡದ ಡಾ.ನಂದಾ ಪಾಟೀಲ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಲಾಯಿತು.

ವಿ.ವಿ.ಯ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ಕುಲಸಚಿವರಾದ ಪ್ರೊ.ಆರ್‌.ಸುನಂದಮ್ಮ, ಪ್ರೊ.ಪಿ.ಜಿ.ತಡಸದ ನಂದಾ ಪಾಟೀಲರಿಗೆ ಗೌರವ ಡಾಕ್ಟರೇಟ್‌ ಪದವಿ ಪ್ರದಾನ ಮಾಡಿದರು.

ಕುಲಪತಿ ಪ್ರೊ.ಸಬಿಹಾ ಭೂಮಿಗೌಡ ವಿಶ್ವವಿದ್ಯಾಲಯದ ಶೈಕ್ಷಣಿಕ ವರ್ಷದ ಸಾಧನೆಗಳ ಪಟ್ಟಿ ವಿವರಿಸಿದರು. ‘ಮಹಿಳಾ ಪದವೀಧರರನ್ನು ನಾಯಕ ಗುಣ ಹೊಂದಿದ ಮಹತ್ತರ ವ್ಯಕ್ತಿಗಳನ್ನಾಗಿ ಮಾಡುವುದು ನಮ್ಮ ಕನಸಾಗಿದೆ’ ಎಂದರು.

ADVERTISEMENT

ಘಟಿಕೋತ್ಸವದಲ್ಲಿ ಸ್ನಾತಕ, ಸ್ನಾತಕೋತ್ತರ ಮತ್ತು ಪಿಜಿ ಡಿಪ್ಲೊಮಾ ಸೇರಿ, ಒಟ್ಟು 10,873 ವಿದ್ಯಾರ್ಥಿನಿಯರ ಪದವಿ ಘೋಷಿಸಲಾಯ್ತು. 46 ವಿದ್ಯಾರ್ಥಿನಿಯರಿಗೆ ಪಿಎಚ್.ಡಿ, 10 ವಿದ್ಯಾರ್ಥಿನಿಯರಿಗೆ ಎಂ.ಫಿಲ್. ಪದವಿ, 56 ವಿದ್ಯಾರ್ಥಿನಿಯರಿಗೆ 67 ಚಿನ್ನದ ಪದಕ ವಿತರಿಸಲಾಯ್ತು.

ವಿ.ವಿ.ಯ ಪ್ರದರ್ಶಕ ಕಲೆಗಳ ವಿಭಾಗದ ವಿದ್ಯಾರ್ಥಿನಿಯರು ನಾಡಗೀತೆ, ಮಹಿಳಾ ಗೀತೆ ಹಾಡಿದರು.

ಗೈರಿನ ಪುನರಾವರ್ತನೆ

ಘಟಿಕೋತ್ಸವಕ್ಕೆ ಗಣ್ಯರ ಗೈರು ಈ ಬಾರಿಯೂ ಮುಂದುವರೆಯಿತು. ರಾಜ್ಯಪಾಲರ ಹೆಸರು ಆಮಂತ್ರಣ ಪತ್ರಿಕೆಯಲ್ಲೇ ಇರಲಿಲ್ಲ. ಅಧ್ಯಕ್ಷತೆ ವಹಿಸಬೇಕಿದ್ದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡರ ಗೈರು ಹಾಜರಿ ಪ್ರಮುಖವಾಗಿ ಗೋಚರಿಸಿತು.

ಹಿಂದಿನ ಹಲ ಘಟಿಕೋತ್ಸವಗಳಿಗೆ ರಾಜ್ಯಪಾಲರು, ಉನ್ನತ ಶಿಕ್ಷಣ ಸಚಿವರು ಹಾಜರಿರಲಿಲ್ಲ. ಮಹಿಳಾ ವಿ.ವಿ.ಯ ಘಟಿಕೋತ್ಸವಕ್ಕೆ ಕುಲಧಿಪತಿ, ಸಮ ಕುಲಾಧಿಪತಿಗಳ ಸತತ ಗೈರಿಗೆ ನೆರೆದಿದ್ದ ಪೋಷಕ ವಲಯದಿಂದ ತೀವ್ರ ಆಕ್ರೋಶ ವ್ಯಕ್ತವಾಯ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.