ADVERTISEMENT

ದೇಶಕ್ಕೆ ದಕ್ಷ ಎಂಜಿನಿಯರ್‌ಗಳು ಅವಶ್ಯಕ: ಕೆ. ಜಿ. ಹಿರೇಮಠ

ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ತಾಂತ್ರಿಕ ಉತ್ಸವ

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 13:32 IST
Last Updated 2 ಡಿಸೆಂಬರ್ 2022, 13:32 IST
ವಿಜಯಪುರ ನಗರದ ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಲಾಗಿರುವ ತಾಂತ್ರಿಕ ಮತ್ತು ಸಂಸ್ಕೃತಿಕ ಉತ್ಸವಕ್ಕೆ ಬಾಗಲಕೋಟೆಯ ಹೆಸ್ಕಾಂ ಮುಖ್ಯ ಎಂಜಿನಿಯರ್‌ ಕೆ. ಜಿ. ಹಿರೇಮಠ  ಶುಕ್ರವಾರ ಚಾಲನೆ ನೀಡಿದರು
ವಿಜಯಪುರ ನಗರದ ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಲಾಗಿರುವ ತಾಂತ್ರಿಕ ಮತ್ತು ಸಂಸ್ಕೃತಿಕ ಉತ್ಸವಕ್ಕೆ ಬಾಗಲಕೋಟೆಯ ಹೆಸ್ಕಾಂ ಮುಖ್ಯ ಎಂಜಿನಿಯರ್‌ ಕೆ. ಜಿ. ಹಿರೇಮಠ  ಶುಕ್ರವಾರ ಚಾಲನೆ ನೀಡಿದರು   

ವಿಜಯಪುರ:ಭಾರತ ತಾಂತ್ರಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುತ್ತಿದ್ದು, ದಕ್ಷ ಎಂಜಿನಿಯರ್‌ಗಳ ಅವಶ್ಯಕತೆ ಇದೆ. ಹೀಗಾಗಿ ವಿದ್ಯಾರ್ಥಿಗಳು ತಾಂತ್ರಿಕ ಕ್ಷೇತ್ರದ ಕಡೆ ಹೆಚ್ಚು ಗಮನಹರಿಸಬೇಕು ಎಂದು ಬಾಗಲಕೋಟೆಯ ಹೆಸ್ಕಾಂ ಮುಖ್ಯ ಎಂಜಿನಿಯರ್‌ ಕೆ. ಜಿ. ಹಿರೇಮಠ ಹೇಳಿದರು.

ನಗರದ ಸಿಕ್ಯಾಬ್‌ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ತಾಂತ್ರಿಕ ಮತ್ತು ಸಂಸ್ಕೃತಿಕ ಉತ್ಸವಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ವೃತ್ತಿಗಳ ಬಗ್ಗೆ ವಿಸ್ತೃತವಾಗಿ ವಿವರಿಸಿದ ಅವರು, ಗೃಹಬಳಕೆ ವಿದ್ಯುತ್‌ ಉತ್ಪಾದನೆ ಮತ್ತು ಅದರ ಮಾರಾಟ, ಸರಬರಾಜು, ಕೆ.ಇ.ಬಿ. ವಿದ್ಯುತ್‌ ಉತ್ಪಾದನೆ ಮತ್ತು ಸರಬರಾಜಿನ ಪ್ರಗತಿಯ ಬಗ್ಗೆ ತಿಳಿಸಿದರು.

ADVERTISEMENT

ಸಿಕ್ಯಾಬ್‌ ಸಂಸ್ಥೆಯ ಅಧ್ಯಕ್ಷ ಎಸ್.‌ಎ.ಪುಣೇಕರ್‌ ಮಾತನಾಡಿ, ಸಂಸ್ಥೆಯು ಬಡ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ನಿರಂತರ ಶ್ರಮಿಸುತ್ತಿದೆ ಎಂದರು.

ಸಂಸ್ಥೆಯ ನಿರ್ದೇಶಕ ಸಲಾಹುದ್ದಿನ್ ಪುಣೇಕರ್‌‌ ಮಾತನಾಡಿ, ಭ್ರಷ್ಟ ವಿಚಾರಗಳಿಂದ ಹೊರಬಂದು ಕಾರ್ಯಗಳಲ್ಲಿ ಪ್ರಾಮಾಣಿಕತೆಯನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ಸು ನಿಶ್ಚಿತ ಎಂದರು.

ವಿದ್ಯಾರ್ಥಿಗಳು ವಿವೇಚಿಸಿಯೇ ಮುಂದಿನ ಕೋರ್ಸ್‌ಗಳ ಆಯ್ಕೆ ಮಾಡಿಕೊಂಡು ಅಧ್ಯಯನ ಮಾಡಿದರೆ ಭವಿಷ್ಯ ಚನ್ನಾಗಿರುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ಆರ್.‌ ಬಿ. ಕದೀರನಾಯ್ಕರ್‌ ಮಾತನಾಡಿದರು.ಉತ್ಸವದ ಅಂಗವಾಗ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ರಸಪ್ರಶ್ನೆ, ನೀಟ್,ಜೆಇಇ ಪ್ರಿಪರೇಟರ್‌ ಟೆಸ್ಟ್‌, ವೈಜ್ಞಾನಿಕ ಮಾದರಿಗಳ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.