ವಿಜಯಪುರ: ಜಿಲ್ಲೆಯಲ್ಲಿ ಸೋಮವಾರ ಮೂವರಿಗೆ ಕೋವಿಡ್ 19 ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 232ಕ್ಕೆ ಏರಿಕೆಯಾಗಿದೆ.
ಎಂಟು ವರ್ಷದ ಬಾಲಕಿ (ಪಿ7068) ಸೇರಿದಂತೆ 24 ವರ್ಷ ವಯಸ್ಸಿನ ಯುವತಿ(ಪಿ7066) ಮತ್ತು 42 ವರ್ಷ ವಯಸ್ಸಿನ ವ್ಯಕ್ತಿ(ಪಿ7067)ಗೆ ಸೋಂಕು ತಗುಲಿದೆ. ಆದರೆ, ಯಾವ ಮೂಲದಿಂದ ಸೋಂಕು ತಗುಲಿದೆ ಎಂಬುದು ದೃಡವಾಗಿಲ್ಲ.
ಇಬ್ಬರು ಗುಣಮುಖ:ಮೂರು ವರ್ಷ ಬಾಲಕಿ(ಪಿ5975) ಮತ್ತು ಐದು ವರ್ಷ ಬಾಲಕಿ(ಪಿ5974) ಸೋಮವಾರ ಕೋವಿಡ್‌ನಿಂದ ಗುಣಮುಖರಾಗಿ ಮನೆಗೆ ತೆರಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.