ADVERTISEMENT

ವಿಜಯಪುರ: ಹೊಸದಾಗಿ ಒಬ್ಬರಿಗೆ ಕೊರೊನಾ ಸೋಂಕು; ಮೂವರು ಗುಣಮುಖ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 16:00 IST
Last Updated 4 ಜೂನ್ 2020, 16:00 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಿಜಯಪುರ: ಜಿಲ್ಲೆಯ 62 ವರ್ಷ ವಯಸ್ಸಿನ ಮಹಿಳೆಯೊಬ್ಬರಿಗೆ ಗುರುವಾರ ಕೋವಿಡ್‌ ಸೋಂಕು ತಗುಲಿದೆ.

ಕಂಟೈನ್ಮೆಂಟ್ ಜೋನ್‍ದಿಂದ ಸೋಂಕು ತಗುಲಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ತಿಳಿಸಿದ್ದಾರೆ.

ಮೂವರು ಗುಣಮುಖ

ADVERTISEMENT

ಜಿಲ್ಲೆಯಲ್ಲಿ ಗುರುವಾರ ಮೂವರು ಸೋಂಕಿತರು ಗುಣಮುಖರಾಗಿದ್ದು, ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು.

ಮೂರು ವರ್ಷದ ಬಾಲಕ(ಪಿ-2713), 24 ವರ್ಷ ವಯಸ್ಸಿನ (ಪಿ-1660) ಮತ್ತು 28 ವರ್ಷ ವಯಸ್ಸಿನ ವ್ಯಕ್ತಿ (ಪಿ-2715) ಸೇರಿದಂತೆ ಮೂವರು ಗುಣಮುಖರಾಗಿ ಜಿಲ್ಲಾಸ್ಪತ್ರೆಯಿಂದ ಬಿಡುಗಡೆಯಾದರು.

31,473 ವಲಸೆ ಕಾರ್ಮಿಕರ ಆಗಮನ

ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಂದ ಒಟ್ಟು 31,473 ಜನ ವಲಸೆ ಕಾರ್ಮಿಕರು ಜಿಲ್ಲೆಗೆ ಆಗಮಿಸಿದ್ದಾರೆ. ಇವರಲ್ಲಿ 23,964 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಪೂರ್ಣಗೊಳಿಸಿದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಸದ್ಯ ಚಾಲ್ತಿಯಲ್ಲಿರುವ 139 ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿ ಒಟ್ಟು 2,789 ಜನರು ಮಾತ್ರ ಸಾಂಸ್ಥಿಕ ಕ್ವಾರಂಟೈನ್‍ನಲ್ಲಿದ್ದಾರೆ ಎಂದು ಹೇಳಿದರು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಜಿಲ್ಲೆಗೆ ಈವರೆಗೆ 26,168 ಜನರು ಆಗಮಿಸಿದ್ದಾರೆ ಎಂದರು.

ಜಿಲ್ಲೆಯಿಂದ ರಾಜ್ಯಸ್ಥಾನ 1,170, ಉತ್ತರಪ್ರದೇಶಕ್ಕೆ 844, ಜಾರ್ಖಂಡ್‌ಗೆ 220, ಮಧ್ಯಪ್ರದೇಶಕ್ಕೆ 332, ಪಂಜಾಬ್‍ಗೆ 15, ಹರಿಯಾಣಗೆ 11, ಬಿಹಾರಗೆ 373, ಆಸ್ಸಾಂಗೆ 32, ಒರಿಸ್ಸಾಗೆ 127, ಗುಜರಾತ್‌ಗೆ 23, ಉತ್ತರಾಖಂಡ್‌ಗೆ 59, ಪಶ್ಚಿಮಬಂಗಾಳಕ್ಕೆ 444 ಜನರು ಸೇರಿದಂತೆ ಒಟ್ಟು 3,832 ಜನರು ವಿವಿಧ ರಾಜ್ಯಗಳಿಗೆ ತೆರಳಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.