
ಪ್ರಜಾವಾಣಿ ವಾರ್ತೆ
ನಾಲತವಾಡ: ಪಟ್ಟಣ ಸಂಪರ್ಕಿಸುವ ರಾಜ್ಯ ಹೆದ್ದಾರಿಯಲ್ಲಿ ಕಾಣಿಸಿಕೊಂಡ ಮೊಸಳೆಯನ್ನು ಸ್ಥಳೀಯ ಯುವಕರು ರಕ್ಷಿಸಿ, ಪೋಲಿಸ್ ಠಾಣೆಗೆ ಒಪ್ಪಿಸಿದರು.
ಮೊಸಳೆಯು ಆಹಾರ ಅರಸಿ ಬಂದಿದ್ದನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಿದರು. ಅರಣ್ಯ ಇಲಾಖೆ ಸಿಬ್ಬಂದಿ ಬಾರದ ಹಿನ್ನೆಲೆಯಲ್ಲಿ ಕಿರಣ್ ಭೋವಿ ಹಾಗೂ ಮತ್ತಿತರು ಮೊಸಳೆ ರಕ್ಷಿಸಿದರು. ಹೊರ ಪೋಲಿಸ್ ಠಾಣೆ ಸಿಬ್ಬಂದಿಯು ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದರು. ಠಾಣೆಗೆ ಕರೆಯಿಸಿಕೊಂಡು ಮೊಸಳೆಯನ್ನು ಒಪ್ಪಿಸಿದರು.
ಮೊಸಳೆಯನ್ನು ಕೃಷ್ಣಾ ನದಿಗೆ ಬಿಡಲಾಗುವುದೆಂದು ಬೀಟ್ ಅಧಿಕಾರಿ ವಿಜಯಕುಮಾರ ತಿಳಿಸಿದರು. ಹನುಮಂತ ಹೆಬ್ಬುಲಿ, ಬಸವರಾಜ ಚಿಂಚೋಳಿ, ಬಸವರಾಜ ಹಿಪ್ಪರಗಿ ಇದ್ದರು.