ADVERTISEMENT

ಮೂರ್ತಿ ಶಿರಚ್ಛೇದ ಮಾಡಿದವರ ವಿರುದ್ದ ಪ್ರಕರಣ ದಾಖಲಿಸಿ: ದಲಿತ ಸಂಘರ್ಷ ಸಮಿತಿ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2026, 5:44 IST
Last Updated 26 ಫೆಬ್ರುವರಿ 2026, 5:44 IST
ಡಾ.ಅಂಬೇಡ್ಕರ್ ಮೂರ್ತಿಯ ಶಿರಚ್ಛೇದ ಮಾಡಿದ ಆರೋಪಿಗಳ ಹೆಸರು ಬಹಿರಂಗಪಡಿಸಿ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಬುಧವಾರ ಕಕ್ಕಳಮೇಲಿ ಗ್ರಾಮದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದರು
ಡಾ.ಅಂಬೇಡ್ಕರ್ ಮೂರ್ತಿಯ ಶಿರಚ್ಛೇದ ಮಾಡಿದ ಆರೋಪಿಗಳ ಹೆಸರು ಬಹಿರಂಗಪಡಿಸಿ ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ಕಾರ್ಯಕರ್ತರು ಬುಧವಾರ ಕಕ್ಕಳಮೇಲಿ ಗ್ರಾಮದಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದರು   

ಸಿಂದಗಿ: ಕಕ್ಕಳಮೇಲಿ ಗ್ರಾಮದಲ್ಲಿ 2019ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಮೂರ್ತಿ ಶಿರಚ್ಛೇದ ಮಾಡಿದ ಆರೋಪಿಗಳ ಮಾಹಿತಿಯನ್ನು ಬಹಿರಂಗಪಡಿಸಬೇಕು. ಅವರ ವಿರುದ್ಧ ರಾಷ್ಟ್ರದ್ರೋಹ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ) ಕಾರ್ಯಕರ್ತರು ಬುಧವಾರ ಕಕ್ಕಳಮೇಲಿಯಿಂದ ಕಾಲ್ನಡಿಗೆ ಜಾಥಾ ಪ್ರಾರಂಭಿಸಿದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ರಮೇಶ ಆಸಂಗಿ ಜಾಥಾಕ್ಕೆ ಚಾಲನೆ ನೀಡಿದರು.

ದಸಂಸ ಜಿಲ್ಲಾ ಸಂಚಾಲಕ ಶರಣು ಸಿಂಧೆ ಮಾತನಾಡಿ, ‘ಕಕ್ಕಳಮೇಲಿ ಗ್ರಾಮದಿಂದ 20 ಕಿ.ಮೀ ದೂರದ ಸಿಂದಗಿಯವರೆಗೆ ಕಾಲ್ನಡಿಗೆ ಜಾಥಾ ನಡೆಯಲಿದೆ. ಬುಧವಾರ ಸಂಜೆ ಮಾರ್ಗ ಮಧ್ಯದಲ್ಲಿರುವ ಬುದ್ಧ ವಿಹಾರದಲ್ಲಿ ವಾಸ್ತವ್ಯ ಹೂಡಿ ಗುರುವಾರ ಬೆಳಿಗ್ಗೆ ಮತ್ತೆ ಕಾಲ್ನಡಿಗೆ ಜಾಥಾ ಮುಂದುವರಿಸಲಾಗುವುದು. ಸಿಂದಗಿ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ ತಲುಪಿ ಅಲ್ಲಿ ಬಹಿರಂಗ ಸಭೆ ನಡೆಯುವುದು. ಅಲ್ಲಿಯೇ ಅನಿರ್ದಿಷ್ಟ ಕಾಲ ಪ್ರತಿಭಟನೆ ಆರಂಭಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

ವಿಭಾಗೀಯ ಸಂಚಾಲಕ ವಿನಾಯಕ ಗುಣಸಾಗರ, ಜಿಲ್ಲಾ ಸಂಚಾಲಕ ಅಶೊಕ ಚಲವಾದಿ, ಶರಣು ಸಿಂಧೆ, ಲಕ್ಕಪ್ಪ ಬಡಿಗೇರ, ಪ್ರಕಾಶ ಗುಡಿಮನಿ, ಪರುಶರಾಮ ದಿಂಡವಾರ, ಮಂಜುನಾಥ ಎಂಟಮಾನ, ರವಿ ಚಾಂದಕವಟೆ, ರಾಜಕುಮಾರ ಸಿಂದಗಿರಿ, ವೀರಪ್ಪ ಕಟ್ಟಿಮನಿ, ವಿಕಾಶ ಕಾಳೆ, ಪರುಶರಾಮ ಬಡಿಗೇರ, ಅನಿಲ ಬಡಿಗೇರ, ಶಿವೂ ಹೊಸಮನಿ, ಮಾದೇವ ಲಿಂಗದಳ್ಳಿ, ಅಶೋಕ ಗುಡಿಸಲಮನಿ, ಸುಭದ್ರಾ ಮೇಲಿನಮನಿ, ಸುನಂದಾ ತಳಕೇರಿ, ಸಾವಿತ್ರಿ ನಾಗಣಸೂರ ಜಾಥಾದ ನೇತೃತ್ವ ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.