ಮುದ್ದೇಬಿಹಾಳ: ಶಿಕ್ಷಣ ಪ್ರೇಮಿ ಶಂಕರಪ್ಪ ತಡಸದ ಅವರ ಸ್ಮರಣಾರ್ಥ ಲಯನ್ಸ್ ಕ್ಲಬ್ ಸಹಯೋಗದಲ್ಲಿ ಗುರುವಾರ ಸರ್ಕಾರಿ ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ಇತರರಿಗೆ ಅನ್ನದಾಸೋಹ ನೆರವೇರಿಸಲಾಯಿತು.
ಮುಖಂಡ ಎಂ.ಎಸ್.ಪಾಟೀಲ ಮಾತನಾಡಿ, ಶಿಕ್ಷಣದ ಸಲುವಾಗಿ ಸಾಕಷ್ಟು ಕೊಡುಗೆ ನೀಡಿದ ಶಂಕರಪ್ಪ ತಡಸದ ಅವರ ಸೇವಾ ಕಾರ್ಯವನ್ನು ಅನ್ನದಾಸೋಹದ ಮೂಲಕ ಸ್ಮರಿಸುವ ಕಾರ್ಯ ಅರ್ಥ ಪೂರ್ಣವಾದದು ಎಂದರು.
ಮುಖಂಡ ಸಿದ್ದರಾಜ ಹೊಳಿ ಮಾತನಾಡಿ, ಲಯನ್ಸ್ ಕ್ಲಬ್‌ನಿಂದ ಮೂರುವರೆ ವರ್ಷ ನಿರಂತರ ಅನ್ನದಾಸೋಹ ಸೇವೆ ನಡೆಯುತ್ತಿದ್ದು 2024 -25ರಲ್ಲಿ ಗೌರ್ನರ್ ಅವಾರ್ಡ್ ಲಭಿಸಿರುವುದು ಹೆಮ್ಮೆಯ ಸಂಗತಿ ಎಂದರು.
ಗಣ್ಯರಾದ ಎಂ.ಬಿ. ಅಂಗಡಿ, ಬಿ.ಸಿ.ಮೋಟಗಿ, ಅಶೋಕ ತಡಸದ, ಎಸ್.ಎನ್.ಪೊಲೇಶಿ, ಬಸನಗೌಡ ಪಾಟೀಲ, ಬಾಬು ಬಿರಾದಾರ, ಲಯನ್ಸ್ ಕ್ಲಬ್ ಅಧ್ಯಕ್ಷ ವೆಂಕನಗೌಡ ಪಾಟೀಲ, ಸದಸ್ಯರಾದ ಮಹೇಂದ್ರ ಓಸ್ವಲ, ರಾಜು ಹುನಗುಂದ, ಸೋಮಶೇಖರ ಅಣ್ಣೆಪ್ಪನವರ, ರಾಜೇಂದ್ರ ಭೋಸಲೆ, ಎಂ.ಬಿ.ನಾವದಗಿ, ದಾನಪ್ಪ ನಾಗಠಾಣ, ಅಯ್ಯಣ್ಣಾ ಕಡಿ, ಡಾ.ಪರಶುರಾಮ ವಡ್ಡರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.