ವಿಜಯಪುರ: ‘ಸರ್ಕಾರ ಛಾಯಾಗ್ರಹಣ ಅಕಾಡೆಮಿ ಪ್ರಾರಂಭ ಮಾಡಿ ಅದರಿಂದ ಛಾಯಾಗ್ರಾಹಕರಿಗೆ ಹೆಚ್ಚಿನ ಜ್ಞಾನ ವಿಸ್ತರಿಸಿಕೊಳ್ಳಲು ಮತ್ತು ಸರ್ಕಾರದ ಸವಲತ್ತುಗಳನ್ನು ಪಡೆಯಲು ಅನುಕೂಲವಾಗುತ್ತದೆ’ ಎಂದು ಯುವ ಭಾರತ ಸಮಿತಿ ಅಧ್ಯಕ್ಷ ಉಮೇಶ ಕಾರಜೋಳ ಹೇಳಿದರು.
ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘ ಹಾಗೂ ಕರ್ನಾಟಕ ರಾಜ್ಯ ಛಾಯಾಚಿತ್ರಗ್ರಾಹಕರ ಸಂಘದ ಸಹಯೋಗದಲ್ಲಿ ನಗರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ಸೋಮವಾರ ಆಯೋಜಿಸಿದ್ದ ವಿಶ್ವ ಛಾಯಾಗ್ರಹಣ ದಿನಾಚರಣೆ, ಹಿರಿಯ ಛಾಯಾಗ್ರಾಹಕರಿಗೆ ಗೌರವ ಸನ್ಮಾನ ಛಾಯಾಗ್ರಾಹಕರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಛಾಯಾಚಿತ್ರಗಳ ಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಯುವ ಬ್ರಿಗೇಡ್ ಸಂಸ್ಥಾಪಕ ಅಧ್ಯಕ್ಷ, ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ‘ಒಂದು ಚಿತ್ರ ಸಾವಿರಕಥೆ ಹೇಳುವ ಸಾಮರ್ಥ್ಯ ಹೊಂದಿದೆ. ಅದರಲ್ಲೂ ಛಾಯಾಗ್ರಹಣ ಐತಿಹಾಸಿಕ ದಾಖಲೆ ಸೃಷ್ಟಿಸುವ, ದಾಖಲಿಸುವ ಒಂದು ಅದ್ಭುತ ಮಾಧ್ಯಮ’ ಎಂದು ಹೇಳಿದರು.
‘ಒಬ್ಬ ಛಾಯಾಗ್ರಹಕ ಒಂದು ಅತ್ಯುತ್ತಮ ದೃಶ್ಯವನ್ನು ಸೆರೆಹಿಡಿಯಲು ತನ್ನ ಸಾಮರ್ಥ್ಯವನ್ನು ಮೀರಿ ಅವಕಾಶಕ್ಕಾಗಿ ಕಾಯುತ್ತಿರುತ್ತಾನೆ. ನೆರಳು ಬೆಳಕಿನ ಸರಿಯಾದ ಅವಕಾಶಕ್ಕಾಗಿ ದಿನಗಟ್ಟಲೆ, ಗಂಟೆಗಟ್ಟಲೆ ಕಾಯುವ ಮತ್ತು ನಂತರ ಸೆರೆಸಿಕ್ಕ ಛಾಯಾಚಿತ್ರವನ್ನು ನೋಡಿ ತನ್ನಷ್ಟಕ್ಕೆ ತಾನೇ ಖುಷಿಪಟ್ಟು ಜಗತ್ತಿಗೆ ಅದನ್ನು ತೋರಿಸುತ್ತಾನೆ’ ಎಂದರು.
ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ನಾಗರಾಜ್ ಟಿ.ಸಿ. ಮಾತನಾಡಿ, ‘ಸರ್ಕಾರ ಛಾಯಾಗ್ರಾಹಕರನ್ನು ಕಾರ್ಮಿಕ ಇಲಾಖೆಯಲ್ಲಿ ಸೇರಿಸಿದ್ದಾರೆ. ಆದರೆ, ಕಟ್ಟಡ ಕಾರ್ಮಿಕರಿಗೆ ಸಿಗುವ ಎಲ್ಲ ಸವಲತ್ತುಗಳು ಛಾಯಾಗ್ರಾಹಕರಿಗೂ ಸಿಗುವಂತೆ ಅವಕಾಶ ಮಾಡಿ ಛಾಯಾಗ್ರಾಹಕರ ಬದುಕನ್ನು ಉಜ್ವಲಗೊಳಿಸಬೇಕು’ ಎಂದು ಒತ್ತಾಯಿಸಿದರು.
ಎಸ್.ಎಸ್.ಎಲ್.ಸಿ , ಪಿ.ಯು.ಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಯುವ ಮುಖಂಡರಾದ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಎಸ್.ಬಿ. ವಿಸ್ಡಮ್ ಅಕಾಡೆಮಿ ಸಂಸ್ಥಾಪಕರಾದ ಶರಣಯ್ಯ ಬಂಡಾರಿಮಠ, ವಿಜಯಪುರ ಜಿಲ್ಲಾ ನೂತನ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ರಮೇಶ ಚವ್ಹಾಣ, ಸಂಘದ ಪದಾಧಿಕಾರಿಗಳಾದ ಪ್ರಶಾಂತ ಪಟ್ಟಣಶಟ್ಟಿ, ಸುರೇಶ ರಾಠೋಡ, ಸತೀಶ ಕಲಾಲ, ರಾಜುಸಿಂಗ ರಜಪೂತ, ಗುರುಬಾಳಪ್ಪ ಗಲಗಲಿ, ಮಲ್ಲಿಕರ್ಜುನ ಪಾರ್ವತಿ, ಪವನ ಅಂಗಡಿ, ಮಹೇಶ ಕುಂಬಾರ, ವಿನೊದ ಮಣ್ಣೂರ, ವಿದ್ಯಾಧರ ಸಾಲಿ, ಛಾಯಾಗ್ರಾಹಕರಾದ ಸಂಗಯ್ಯ ಮಠಪತಿ, ಮಹೇಶ ಪಾಟೀಲ್, ಸಂಜಯ ರೇವೆ, ಶಿವರಾಜ ಕುಂಟೋಜಿ, ರವಿ ತಾಳಿಕೋಟಿ, ಶಶಿಕುಮಾರ ಕುಂಬಾರ, ಸುಭಾಸ ಪವಾರ, ಸಂಗಮೇಶ ಬಿರಾದಾರ, ಚಂದ್ರಕಾಂತ ವಡ್ಡರ, ಸುನೀಲ ಬಿರಾದಾರ, ಸುರೇಶ ಗಲ್ಪಿ, ಬಾಳು ಕುಲರ್ಕಣಿ, ಮಲ್ಲು ಚಕ್ರವರ್ತಿ ಸುನೀಲ ಭೈರವಾಡಗಿ, ವಿಜಯ ಮೈದರಗಿ, ಗೌಡಪ್ಪ ಬಿರಾದಾರ, ವಿರೇಶ ಗಬ್ಬೂರ ಇದ್ದರು.
ಛಾಯಾಗ್ರಾಹಕರು ಇಂದು ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ ಸರ್ಕಾರದ ಸವಲತ್ತುಗಳು ಛಾಯಾಗ್ರಾಹಕರಿಗೆ ಸಿಗುವಂತಾಗಲಿ. ಛಾಯಾಗ್ರಹಣ ಕ್ಷೇತ್ರ ಅತ್ಯಂತ ಕ್ರಿಯಾಶೀಲವಾಗಿದ್ದು ಎಲ್ಲರೂ ಆನಂದದ ಜೀವನ ನಡೆಸುವಂತಾಗಲಿಉಮೇಶ ಕಾರಜೋಳ ಅಧ್ಯಕ್ಷ ಯುವ ಭಾರತ ಸಮಿತಿವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.