ADVERTISEMENT

ಬಾಳೆ ಬೆಳೆ ನಾಶ; ಪರಿಹಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 19 ಮೇ 2021, 12:59 IST
Last Updated 19 ಮೇ 2021, 12:59 IST
ಇತ್ತೀಚೆಗೆ ಬೀಸಿದ ಬಿರುಗಾಳಿ, ಮಳೆಗೆ ನೆಲಕಚ್ಚಿರುವ ಬಾಳೆ ಗೊನೆಗಳೊಂದಿಗೆ ಬಬಲೇಶ್ವರ ತಾಲ್ಲೂಕಿನ ಸಂಗಾಪೂರ (ಎಸ್.ಎಸ್.) ಗ್ರಾಮದ ರೈತ ಬಸವರಾಜ ಕಾತ್ರಾಳ
ಇತ್ತೀಚೆಗೆ ಬೀಸಿದ ಬಿರುಗಾಳಿ, ಮಳೆಗೆ ನೆಲಕಚ್ಚಿರುವ ಬಾಳೆ ಗೊನೆಗಳೊಂದಿಗೆ ಬಬಲೇಶ್ವರ ತಾಲ್ಲೂಕಿನ ಸಂಗಾಪೂರ (ಎಸ್.ಎಸ್.) ಗ್ರಾಮದ ರೈತ ಬಸವರಾಜ ಕಾತ್ರಾಳ   

ವಿಜಯಪುರ: ಬಬಲೇಶ್ವರ ತಾಲ್ಲೂಕಿನ ಸಂಗಾಪೂರ (ಎಸ್.ಎಸ್.) ಗ್ರಾಮದ ರೈತ ಬಸವರಾಜ ಕಾತ್ರಾಳ ಅವರು ತಮ್ಮ ಮೂರು ಎಕರೆಜಮೀನಿನಲ್ಲಿ ಬೆಳೆದಿರುವ ಬಾಳೆ ಕೋವಿಡ್ ಲಾಕ್‍ಡೌನ್ ಹಾಗೂ ಇತ್ತೀಚೆಗೆ ಬೀಸಿದ ಬಿರುಗಾಳಿ, ಮಳೆಯ ಪರಿಣಾಮವಾಗಿ ನೆಲಕಚ್ಚಿದೆ.

ಕಾತ್ರಾಳ ಅವರು ಬೆಳೆದ ಬಾಳೆ ಹಣ್ಣನ್ನು ಲಾಕ್‌ಡೌನ್‌ ಪರಿಣಾಮ ವ್ಯಾಪಾರಸ್ಥರು ಖರೀದಿ ಮಾಡಿಕೊಂಡು ಹೋಗದೇ ಹೊಲದಲ್ಲೇ ಇತ್ತು. ಇನ್ನೇನುಬೆಳೆದ ಬೆಳೆಯು ಕೈ ಸೇರಬೇಕೆನ್ನುವ ಹೊತ್ತಿನಲ್ಲಿ ಅಕಾಲಿಕ ಗಾಳಿ ಮಳೆಗೆ ಬೆಳೆಯು ಸಂಪೂರ್ಣವಾಗಿ ನೆಲಕಚ್ಚಿದೆ.

ಬಾಳೆಯನ್ನು ಖರೀದಿ ಮಾಡುವಂತೆ ಸಂಬಂಧಪಟ್ಟ ತೋಟಗಾರಿಕೆ ಇಲಾಖೆಗೆ ಜಿಲ್ಲಾಡಳಿತ ಸೂಚಿಸಬೇಕು ಹಾಗೂ ಕಷ್ಟಪಟ್ಟು ಬೆಳೆದ ಬಾಳೆಗೆ ಪರಿಹಾರ ನೀಡುವಂತಾಗಬೇಕು ಎಂದು ರೈತ ಬಸವರಾಜ ಕಾತ್ರಾಳ ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.