ADVERTISEMENT

ದೇವರಹಿಪ್ಪರಗಿ | ಆನಂದಕ್ಕೆ ಅಧ್ಯಾತ್ಮ ಅಗತ್ಯ: ಅಮೃತಾನಂದ ಶ್ರೀ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2025, 14:24 IST
Last Updated 13 ಫೆಬ್ರುವರಿ 2025, 14:24 IST
ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆರಂಭಗೊಂಡಿರುವ ಅಮೃತಾನಂದಶ್ರೀಗಳ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮದಲ್ಲಿ ಆಲಮೇಲ ವಿರಕ್ತಮಠದ ಜಯದೇವ ಮಲ್ಲಿಬೊಮ್ಮಶ್ರೀಗಳು ಮಾತನಾಡಿದರು.
ಕಡ್ಲೇವಾಡ ಪಿಸಿಎಚ್ ಗ್ರಾಮದಲ್ಲಿ ಮಹಾಶಿವರಾತ್ರಿ ಅಂಗವಾಗಿ ಆರಂಭಗೊಂಡಿರುವ ಅಮೃತಾನಂದಶ್ರೀಗಳ ಆಧ್ಯಾತ್ಮೀಕ ಪ್ರವಚನ ಕಾರ್ಯಕ್ರಮದಲ್ಲಿ ಆಲಮೇಲ ವಿರಕ್ತಮಠದ ಜಯದೇವ ಮಲ್ಲಿಬೊಮ್ಮಶ್ರೀಗಳು ಮಾತನಾಡಿದರು.   

ದೇವರಹಿಪ್ಪರಗಿ: ಜೀವನದ ಪ್ರತಿಕ್ಷಣಗಳನ್ನು ಆನಂದದಿಂದ ಕಳೆಯಲು ಆಧ್ಯಾತ್ಮಿಕ ವಿಚಾರಧಾರೆಗಳ ಅಗತ್ಯವಿದೆ ಎಂದು ಆಲಮೇಲ ವಿರಕ್ತಮಠದ ಜಯದೇವ ಮಲ್ಲಿಬೊಮ್ಮ ಶ್ರೀಗಳು ಹೇಳಿದರು.

ಮಹಾಶಿವರಾತ್ರಿ ಅಂಗವಾಗಿ ತಾಲ್ಲೂಕಿನ ಕಡ್ಲೇವಾಡ ಪಿಸಿಎಚ್ ಗ್ರಾಮದ ರಾಚೋಟೇಶ್ವರಮಠದ ಆವರಣದಲ್ಲಿ ಗುರುವಾರ ಆರಂಭಗೊಂಡ ಅಮೃತಾನಂದಶ್ರೀಗಳ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಜೀವನ ಶಾಶ್ವತವಲ್ಲ. ಆದರೆ ಜೀವನ ಪುಸ್ತಕದ ಪ್ರತಿಪುಟ ನೆನೆಪಿನಲ್ಲಿ ಉಳಿಯುವಂತೆ ಬಾಳಬೇಕು’ ಎಂದರು.

ವಿಜಯಪುರ ಅನುಗ್ರಹ ಆಸ್ಪತ್ರೆಯ ನೇತ್ರ ತಜ್ಞ ಪ್ರಭುಗೌಡ ಲಿಂಗದಳ್ಳಿ ಮಾತನಾಡಿ, ‘ನಾವು ಅಜ್ಞಾನದ ಜಗತ್ತಿನಿಂದ ಸುಜ್ಞಾನದ ಜಗದೆಡೆಗೆ ಸಾಗಬೇಕಾಗಿದೆ. ಜೀವನದಲ್ಲಿ ಆಸೆಗಳಿರಬೇಕು ವಿನಹಃ ಎಂದಿಗೂ ದುರಾಸೆಗಳಿರಬಾರದು’ ಎಂದರು.

ADVERTISEMENT

ಬೋರೆಗಾಂವ ಅಮೋಘಸಿದ್ಧಮಠದ ಬಸವರಾಜಶ್ರೀಗಳು ಮಾತನಾಡಿ, ‘ಸಂತರು, ಶರಣರು, ಮಹಾತ್ಮರು ನುಡಿದ ಮಾತುಗಳನ್ನು ಮೆಲುಕು ಹಾಕುವುದೇ ಸತ್ಸಂಗ, ಪ್ರವಚನಗಳಾಗಿವೆ’ ಎಂದರು.

ಸಿದ್ಧಕೃಪಾ ಮಲ್ಲಿಕಾರ್ಜುನ ಮಹಾಂತ ಮಠದ ಬಸವಾನಂದ ಶ್ರೀಗಳು ನಿರೂಪಿಸಿದರು. ಮುಳಸಾವಳಗಿಯ ನಿಂಗರಾಯರು ಭಕ್ತಿಗೀತೆ ಪ್ರಸ್ತುತ ಪಡಿಸಿದರು. ಮುಳಸಾವಳಗಿ ಶರಣಗೌಡ ಮಾಲಿಪಾಟೀಲ ಹಾಗೂ ಅಡಿವೆಪ್ಪ ಕೊಂಡಗೂಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರವಚನದ ನಂತರ ಮಹಾಪ್ರಸಾದ ಜರುಗಿತು.

ಪ್ರವಚನಕಾರ ಅಮೃತಾನಂದಶ್ರೀಗಳು, ಪ್ರಚಾರ ಸಮಿತಿ ಅಧ್ಯಕ್ಷ ಸಾಯಿಕುಮಾರ ಬಿಸನಾಳ, ಸೋಮನಗೌಡ ಪಾಟೀಲ, ಮಲ್ಲಿಕಾರ್ಜುನ ಬಿರಾದಾರ, ಅಶೋಕ ಸೂಳಿಭಾವಿ, ಸಾಹೇಬಗೌಡ ರೆಡ್ಡಿ, ನಿಂಗರಾಯ ಸಂಗೋಗಿ, ಪಿಡ್ಡಪ್ಪ ಗಣಜಲಿ, ವಿಧ್ಯಾಧರ ಸಂಗೋಗಿ, ಚಂದ್ರಶೇಖರ ಗಣಜಲಿ, ವಿಠ್ಠಲ ದೇಗಿನಾಳ, ವಿಠ್ಠಲ ಕನ್ನೋಳ್ಳಿ, ಪ್ರಭಾಕರ ಸೂಳಿಭಾವಿ, ಸುಭಾಸ ಕಬಾಡಗಿ, ಹಣಮಂತ ಸಂಗೋಗಿ, ಬಾಲಚಂದ್ರ ಗುಡ್ಡಳ್ಳಿ, ಜಿ.ಪಿ.ಬಿರಾದಾರ ಸೇರಿದಂತೆ ಚಿಕ್ಕರೂಗಿ, ಮುಳಸಾವಳಗಿ ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.