ದೇವರಹಿಪ್ಪರಗಿ: ರಾಘವೇಂದ್ರ ಸ್ವಾಮಿಗಳ 354ನೇ ಆರಾಧನಾ ಮಹೋತ್ಸವದ ಉತ್ತರಾಧನೆ ಸಂಭ್ರಮದಿಂದ ಜರುಗಿತು.
ಪಟ್ಟಣದ ವಿಠ್ಠಲಮಂದಿರದಲ್ಲಿ 3 ದಿನಗಳಿಂದ ಆರಂಭಗೊಂಡ ಆರಾಧನಾ ಮಹೋತ್ಸವದಲ್ಲಿ ಮೊದಲದಿನ ಪೂರ್ವಾರಾಧನೆ, ಎರಡನೆಯ ದಿನ ಮಧ್ಯಾರಾಧನೆ ನಂತರ ಉತ್ತರಾಧನೆ ಜರುಗಿದವು.
ಪ್ರತಿದಿನ ಬೆಳಿಗ್ಗೆ ರಾಯರ ಮಹಾಪೂಜೆ, ಅಷ್ಠೋತ್ತರ ಸಾಂಗವಾಗಿ ಜರುಗಿ ನಂತರ ತೀರ್ಥ, ಮಹಾಪ್ರಸಾದ ವಿತರಣೆಯಾದವು. ರಾತ್ರಿ ರಾಯರ ಕುರಿತು ಭಕ್ತಿಗೀತೆಗಳ ಭಜನೆ ಜರುಗಿತು.
ಮಹೋತ್ಸವದಲ್ಲಿ ವೈದ್ಯರುಗಳಾದ ಆರ್.ಆರ್.ನಾಯಿಕ್, ಸತೀಶ ನಾಡಗೌಡ, ಚಿದಂಬರ ಸೇವಾ ಸಮಿತಿಯ ವೆಂಕಟೇಶ ಕುಲಕರ್ಣಿ, ಸುಧೀರ ಪಾಟೀಲ, ಗುರುರಾಜ್ ಕುಲಕರ್ಣಿ, ನರೇಂದ್ರ ನಾಡಗೌಡ, ಪ್ರಲ್ಹಾದ ಕುಲಕರ್ಣಿ, ಪ್ರಭಾಕರ ಕುಲಕರ್ಣಿ, ಅಶೋಕ ಜೋಷಿ, ಶರತ್ ಕುಲಕರ್ಣಿ, ಸಂಗೀತಾ ನಾಯಿಕ್, ಮಾಧುರಿ ನಾಡಗೌಡ, ಶಶಿಕಲಾ ಕುಲಕರ್ಣಿ, ಪ್ರೀತಿ ಪಾಟೀಲ, ವಿದ್ಯಾಶ್ರೀ ಕುಲಕರ್ಣಿ, ಭಾವನಾ ಪುರೋಹಿತ, ವಿಜಯಲಕ್ಷ್ಮೀ ಕುಲಕರ್ಣಿ, ಪ್ರಮೀಳಾಬಾಯಿ ಕುಲಕರ್ಣಿ, ರೇಖಾ ನಾಡಗೌಡ, ಸುಜಾತಾ ನಾಡಗೌಡ, ಅಂಬಿಕಾ ಕುಲಕರ್ಣಿ, ಅನೀತಾ ಕುಲಕರ್ಣಿ, ಶ್ರೀದೇವಿ ಜೋಷಿ, ಉಮಾಬಾಯಿ ಜೋಷಿ, ವಾಸಂತಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.