ADVERTISEMENT

ಇಂಡಿ: ಆಹಾರ ಭದ್ರತೆಗಾಗಿ ವಿಕಸಿತ ಕೃಷಿ ಸಂಕಲ್ಪ ಅಭಿಯಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 13:10 IST
Last Updated 3 ಜೂನ್ 2025, 13:10 IST
ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಚಂದ್ರಕಾಂತ ಪವಾರ ಮಾತನಾಡಿದರು
ಇಂಡಿ ತಾಲ್ಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಮಂಗಳವಾರ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಚಂದ್ರಕಾಂತ ಪವಾರ ಮಾತನಾಡಿದರು   

ಇಂಡಿ: ‘ಆಧುನಿಕ ಕೃಷಿ ಪದ್ಧತಿಗಳ ಮೂಲಕ ರೈತರನ್ನು ಸಮೃದ್ಧಗೊಳಿಸುವ ಅಡಿಪಾಯವನ್ನು ನಿರ್ಮಿಸುವ ಸಂಕಲ್ಪದೊಂದಿಗೆ ಕೇಂದ್ರ ಸರ್ಕಾರ ತಾಲ್ಲೂಕಿನಾದ್ಯಂತ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಹಮ್ಮಿಕೊಂಡಿದೆ’ ಎಂದು ಕೃಷಿ ಉಪ ನಿರ್ದೇಕ ಚಂದ್ರಕಾಂತ ಪವಾರ ಹೇಳಿದರು.

ತಾಲ್ಲೂಕಿನ ಹಿಂಗಣಿ ಗ್ರಾಮದ ಗ್ರಾಮ ಪಂಚಾಯಿತಿ ಕಾರ್ಯಾಲಯದ ಆವರಣದಲ್ಲಿ ಕೃಷಿ ವಿಜ್ಞಾನ ಕೇಂದ್ರ ಇಂಡಿ ಮತ್ತು ಕೃಷಿ ಇಲಾಖೆಯಿಂದ ಮಂಗಳವಾರ ನಡೆದ ವಿಕಸಿತ ಕೃಷಿ ಸಂಕಲ್ಪ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮಹಾದೇವಪ್ಪ ಏವೂರ ಮಾತನಾಡಿ, ‘ತಾಲ್ಲೂಕಿನ ಐದು ಲಕ್ಷ ಜನರಿಗೆ ಆಹಾರ ಭದ್ರತೆಯನ್ನು ಖಚಿತಪಡಿಸುವುದು ಕೃಷಿ ಇಲಾಖೆ ಉದ್ದೇಶ. ಪೌಷ್ಟಿಕ ಆಹಾರದ ಲಭ್ಯತೆಯನ್ನು ಖಾತರಿಪಡಿಸುವುದು, ರೈತರ ಆದಾಯವನ್ನು ಸುಧಾರಿಸುವ ಮತ್ತು ಭವಿಷ್ಯದ ಪೀಳಿಗೆಗೆ ನೈಸರ್ಗಿಕ ಸಂಪನ್ಮೂಲಗಳನ್ನು ಸಂರಕ್ಷಿಸುವುದು ಈ ಅಭಿಯಾನದಲ್ಲಿ ಸೇರಿದೆ. ಈ ಅಂದೋಲನ ಖರೀಫ್ ಮತ್ತು ರಾಬಿ ಬೆಳೆಗಳಿಗೆ ಬಿತ್ತನೆ ಆರಂಭಕ್ಕೆ ಮುಂಚೆ ಪ್ರತಿವರ್ಷ ನಡೆಸಲು ಉದ್ದೇಶಿಸಲಾಗಿದೆ’ ಎಂದರು.

ADVERTISEMENT

ಭಾರತೀಯ ತೋಟಗಾರಿಕೆ ಸಂಸ್ಥೆಯ ಬೆಂಗಳೂರಿನ ಅಧಿಕಾರಿ ಮಂಜುನಾಥ ಎಲ್. ಮಾತನಾಡಿದರು.

ಕೃಷಿ ವಿಜ್ಞಾನಿ ಪ್ರಸಾದ, ಕೃಷಿ ವಿಜ್ಞಾನಿ ಪ್ರಕಾಶ, ವಿಜ್ಞಾನಿ ವೀಣಾ, ವಿಜ್ಞಾನಿ ಬಾಲಾಜಿ ಕೃಷಿ ಸಂಕಲ್ಪ ಅಭಿಯಾನ ಕುರಿತು ರೈತರಿಗೆ ತಿಳಿಸಿದರು.

ರಾಜಶೇಖರ, ನಜೀರಸಾಬ, ಅಂಬಣ್ಣ ಕೇಲಿ, ಜಗದೀಶ ಮಹಾದೇವ ಪೂಜಾರ, ಲೀಲಾವತಿ ಗಾಯಕವಾಡ, ಜ್ಯೋತಿ ಬೇನೂರ, ಶ್ರೀದೇವಿ ಕಟ್ಟಿಮನಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.