ಆಲಮಟ್ಟಿ: ವಿದ್ಯಾರ್ಥಿದೆಸೆಯಿಂದಲೇ ಮಕ್ಕಳು ಕ್ರೀಡೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಹೇಳಿದರು.
ಇಲ್ಲಿಯ ಆರ್ ಬಿಪಿಜಿ ಹಳಕಟ್ಟಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜರುಗಿದ ನಿಡಗುಂದಿ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿರುವ 2 ಕೋಟಿ ಮಕ್ಕಳ ಮಾನಸಿಕ, ಶಾರೀರಿಕ, ಬೌದ್ಧಿಕವಾಗಿ ಪ್ರಗತಿ ಹೊಂದಲು ಅಕಾಡೆಮಿ ಕಾರ್ಯನಿರ್ವಹಿಸುತ್ತಿದೆ. ಮಕ್ಕಳನ್ನು ಸುಸಂಸ್ಕೃತ, ಸಮಾಜಮುಖಿ ನಾಗರಿಕರನ್ನಾಗಿ ರೂಪಿಸುವುದೇ ನಮ್ಮ ಮುಂದಿರುವ ಗುರಿ ಎಂದರು.
ಮಗುವಿನ ನಗುವಿನ ಮುಂದೆ ಐಶ್ವರ್ಯ ನಗಣ್ಯ, ಮಗು ನಗುತ್ತಾ ಸಂತೋಷದಿಂದ ಇದ್ದರೆ, ಆ ಇಡೀ ಕುಟುಂಬ ಸಂತಸದಿಂದ ಇರುತ್ತದೆ. ಆ ನಗು ಎಂದಿಗೂ ಕುಂದದಂತೆ ಅಕಾಡೆಮಿ ನಾನಾ ಯೋಜನೆಗಳನ್ನು ಜಾರಿಗೆ ತರುತ್ತಿದೆ ಎಂದು ಬಬಲೇಶ್ವರ ತಿಳಿಸಿದರು.
ತಹಶೀಲ್ದಾರ್ ಎ.ಡಿ. ಅಮರಾವದಗಿ, ತಾಲ್ಲೂಕು ಪಂಚಾಯ್ತಿ ಇಒ ವೆಂಕಟೇಶ ವಂದಾಲ, ಐ.ಎಲ್. ಕಳಸಾ, ರವಿ ಚಂದ್ರಗಿರಿಯವರ, ಮಹೇಶ ಪಾಟೀಲ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕವಿತಾ ಬಡಿಗೇರ, ಎಸ್.ಬಿ. ಪಾಟೀಲ,ಬಸವರಾಜ ಬಾದರದಿನ್ನಿ , ಎಸ್.ಬಿ. ದಳವಾಯಿ, ಎಸ್.ಎಂ. ಅವಟಿ, ಎಸ್.ಎಂ. ಜಲ್ಲಿ, ಮಂಜುನಾಥ ಹಿರೇಮಠ, ಪಿ.ಎ. ಹೇಮಗಿರಿಮಠ, ಸಿಡಿಪಿಓ ಎಸ್.ಎಂ. ಹಿರೇಮಠ ಮತ್ತಿತರರು ವೇದಿಕೆಯ ಮೇಲಿದ್ದರು. ಜಿ.ಎಂ. ಕೊಟ್ಯಾಳ ಅಧ್ಯಕ್ಷತೆ ವಹಿಸಿದ್ದರು. ಎನ್.ಎಸ್. ಬಿರಾದಾರ, ಗುಲಾಬಚಂದ ಜಾಧವ, ಎಸ್.ಐ.ಗಿಡ್ಡಪ್ಪಗೋಳ, ಎಸ್.ಎಚ್. ನಾಗಣಿ ಇದ್ದರು.
ವಿಜಯೀಭವ: ಲೈವ್ ಟೆಲಿಕಾಸ್ಟ್
ಅಕಾಡೆಮಿಯಿಂದ ಧಾರವಾಡದಲ್ಲಿ ಸ್ಟುಡಿಯೊ ತೆರೆಯಲಾಗುತ್ತಿದ್ದು ಅಲ್ಲಿ ಪ್ರತಿ ತಿಂಗಳು ಆಯ್ದ ವಿಷಯಗಳ ತಜ್ಞರನ್ನು ಕರೆಯಿಸಿ ಲೈವ್ ಟೆಲಿಕಾಸ್ಟ್ ಮಾಡಲಾಗುತ್ತದೆ.
ವಿಜಯೀಭವ ಎನ್ನುವ ಈ ಕಾರ್ಯಕ್ರಮದ ಲಿಂಕ್ ನ್ನು ಪ್ರತಿ ಶಾಲೆಗೂ ತಲುಪಿಸಿ ಎಲ್ಲ ಮಕ್ಕಳು ಅದನ್ನು ವೀಕ್ಷಿಸುವ ಹಾಗೆ ವ್ಯವಸ್ಥೆ ಮಾಡಲಾಗುತ್ತದೆ. ಶೀಘ್ರವೇ ಇದಕ್ಕೆ ಚಾಲನೆ ನೀಡಲಾಗುವುದು ಎಂದು ಬಬಲೇಶ್ವರ ತಿಳಿಸಿದರು.
ಪತ್ರಕರ್ತರಿಗೆ ಮಾಹಿತಿ ನೀಡಿದ ಅವರು ರಾಜ್ಯದಲ್ಲಿನ ಬಾಲಮಂದಿರದಲ್ಲಿನ ಅನಾಥ ಮಕ್ಕಳನ್ನು ಪ್ರವಾಸಕ್ಕೆ ಕರೆದೊಯ್ದು ಅವರ ಮಾನಸಿಕ ವಿಕಾಸಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮಕ್ಕಳ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು ಅದರ ಬೆಳವಣಿಗೆಗೂ ಅಕಾಡೆಮಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಗಮೇಶ ಬಬಲೇಶ್ವರ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.