ADVERTISEMENT

ದೇವರಹಿಪ್ಪರಗಿ | ಗಣಕೀಕೃತ ಉತಾರ ನೀಡಲು ಆಗ್ರಹ

ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ ಶೆಟ್ಟಿ ಬಣ)ಪದಾಧಿಕಾರಿಗಳ ನೇತೃತ್ವದಲ್ಲಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 6:10 IST
Last Updated 16 ಡಿಸೆಂಬರ್ 2025, 6:10 IST
ದೇವರಹಿಪ್ಪರಗಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ ಶೆಟ್ಟಿ ಬಣ)ಪದಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ವಾರ್ಡ್‌ಗಳ ನಿವಾಸಿಗಳು ತಹಶೀಲ್ದಾರ್‌ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು 
ದೇವರಹಿಪ್ಪರಗಿಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ ಶೆಟ್ಟಿ ಬಣ)ಪದಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ವಾರ್ಡ್‌ಗಳ ನಿವಾಸಿಗಳು ತಹಶೀಲ್ದಾರ್‌ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು    

ದೇವರಹಿಪ್ಪರಗಿ: ಮನೆಗಳ ಇ-ಸ್ವತ್ತು (ಗಣಕೀಕೃತ ಉತಾರಿ)ಗಾಗಿ ಪಟ್ಟಣದ ಕೆಲವು ವಾರ್ಡ್‌ ನಿವಾಸಿಗಳು ಕರ್ನಾಟಕ ರಕ್ಷಣಾ ವೇದಿಕೆಯ(ಪ್ರವೀಣ ಶೆಟ್ಟಿ ಬಣ)ಪದಾಧಿಕಾರಿಗಳೊಂದಿಗೆ ಸೇರಿ ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ಪ್ರಕಾಶ ಸಿಂದಗಿ ಅವರಿಗೆ ಮನವಿ ಸಲ್ಲಿಸಿದರು.

ಪಟ್ಟಣದ ಟಿಪ್ಪು ವೃತ್ತದಲ್ಲಿ ಸೋಮವಾರ ಸಭೆ ಸೇರಿದ ವಿವಿಧ ವಾರ್ಡ್‌ಗಳ ನಿವಾಸಿಗಳು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳ ನೇತೃತ್ವದಲ್ಲಿ ಗಣಕೀಕೃತ ಉತಾರೆಗಾಗಿ ಆಗ್ರಹಿಸಿ ಮೆರವಣಿಗೆ ಹೊರಟು ಮೊಹರೆ ಹಣಮಂತ್ರಾಯ ವೃತ್ತ, ಅಂಬೇಡ್ಕರ್ ವೃತ್ತದ ಮಾರ್ಗವಾಗಿ ಪಟ್ಟಣ ಪಂಚಾಯಿತಿ ತಲುಪಿ ಆವರಣದಲ್ಲಿ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

ಕರವೇ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀಶೈಲ ಮುಳಜಿ ಮಾತನಾಡಿ, ವಾರ್ಡ್‌ನಲ್ಲಿ ಹಲವು ವರ್ಷಗಳಿಂದ ಸಾವಿರಾರು ಕುಟುಂಬಗಳು ಮನೆ ಕಟ್ಟಿಸಿ ವಾಸವಾಗಿದ್ದಾರೆ ಅವರ ಮನೆಗಳಿಗೆ ಇ-ಸ್ವತ್ತು ಉತಾರಿ ಪಟ್ಟಣ ಪಂಚಾಯಿತಿಯಿಂದ ನೀಡಬೇಕು. ಉತಾರಿ ನೀಡುವವರೆಗೆ ನಾವು ಕದಡುವದಿಲ್ಲ ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅಪ್ರೋಜ ಅಹ್ಮದ್‌ ಪಟೇಲ ಅವರಿಗೆ ಆಗ್ರಹಿಸಿದರು.

ADVERTISEMENT

ಕರವೇ ರಾಜ್ಯ ಘಟಕದ ಉಪಾಧ್ಯಕ್ಷ ಬಸವರಾಜ ತಾಳಿಕೋಟಿ, ತಾಲ್ಲೂಕು ಘಟಕದ ಅಧ್ಯಕ್ಷ ರಹೀಮಾನ ಕಣಕಾಲ್, ಅವೋಗೇಶ್ವರಧಾಮ ಶ್ರೀ ಮಾತನಾಡಿ, ಹಲವು ವಷಗಳಿಂದ ವಾರ್ಡ್‌ ನಿವಾಸಿಗಳು ಪಟ್ಟಣ ಪಂಚಾಯಿತಿಗೆ ಕಂದಾಯ ನೀಡುತ್ತಿದ್ದು, ಇ-ಸ್ವತ್ತು ಉತಾರಿಯಿಂದ ಸರ್ಕಾರದ ಯೋಜನೆಗಳು ಸದುಪಯೋಗ ಪಡೆದುಕೊಳ್ಳಲು ಆಗುತ್ತದೆ. ಶೀಘ್ರ ನಿವಾಸಿಗಳ ಸಮಸ್ಯೆ ಬಗೆಹರಿಸಬೇಕು ಇಲ್ಲದಿದ್ದರೆ ಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.  

ತಹಶೀಲ್ದಾರ್ ಮನವಿ ಸ್ವೀಕರಿಸಿ, ಈಗಾಗಲೇ ಪಟ್ಟಣ ಪಂಚಾಯಿತಿ ಹಾಗೂ ಕಂದಾಯ ಇಲಾಖೆಯಿಂದ ಸರ್ಕಾರಕ್ಕೆ ಪತ್ರ ಬರೆದು, ಹಕ್ಕುಪತ್ರ ಹಾಗೂ ಇ-ಸ್ವತ್ತು ಉತಾರಿಯ ತಾಂತ್ರಿಕ ಸಮಸ್ಯೆ ಕುರಿತು ಜಿಲ್ಲಾಧಿಕಾರಿ ಹಾಗೂ ಸರ್ಕಾರಕ್ಕೆ ಮಾಹಿತಿ ಒದಗಿಸಲಾಗಿದೆ. ಸರ್ಕಾರದಿಂದ ಸುತ್ತೋಲೆ ಬಂದಮೇಲೆ ನಿವಾಸಿಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.

ಕರವೇ ಪದಾಧಿಕಾರಿಗಳಾದ ಭೀಮನಗೌಡ ನಾಗರಾಳ, ಅಶೋಕ ಗೊಲ್ಲರ, ಆನಂದ ಹಡಗಲಿ, ನಾಗೇಶ ಕಮತಗಿ, ಪ್ರಭುಕುಮಾರ ಬಾಗೇವಾಡಿ, ದಿಲೀಪ್ ದೊಡ್ಡಮನಿ, ಹುಸೇನ್ ಕೊಕಟನೂರ, ಹಸನಸಾಬ ಹರನಾಳ, ದೌಲಸಾಬ್ ಯರಗಲ್, ದಾವೂದ್ ಮನಗೂಳಿ, ಸಲೀಂ ಮನಿಯಾರ ಸೇರಿದಂತೆ ಪಟ್ಟಣದ ಮಹಿಳೆಯರು ಇದ್ದರು.

ಪಟ್ಟಣ ಪಂಚಾಯಿತಿ ಆವರಣದಲ್ಲಿ ಧರಣಿ ಹಲವು ವರ್ಷಗಳಿಂದ ವಾಸವಾಗಿರುವ ನಿವಾಸಿಗಳು ಸಮಸ್ಯೆ ನಿವಾರಿಸಲು ಜಿಲ್ಲಾಧಿಕಾರಿಗೆ ಮಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.