ADVERTISEMENT

ವಿಜಯಪುರ: ₹1,36 ಕೋಟಿ ಮೌಲ್ಯದ ನಕಲಿ ಕ್ರಿಮಿನಾಶಕ ವಶ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 6:16 IST
Last Updated 14 ಸೆಪ್ಟೆಂಬರ್ 2025, 6:16 IST
ವಿಜಯಪುರ ಕೆಐಎಡಿಬಿಯಲ್ಲಿರುವ ಗೋದಾಮಿನಿ ಮೇಲೆ ಕೃಷಿ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ವಶಪಡಿಸಿಕೊಡಿರುವ ನಕಲಿ ಕ್ರಿಮಿನಾಶಕ ಔಷಧ ಮತ್ತು ಬಂಧಿತ ಆರೋಪಿಗಳು 
ವಿಜಯಪುರ ಕೆಐಎಡಿಬಿಯಲ್ಲಿರುವ ಗೋದಾಮಿನಿ ಮೇಲೆ ಕೃಷಿ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ವಶಪಡಿಸಿಕೊಡಿರುವ ನಕಲಿ ಕ್ರಿಮಿನಾಶಕ ಔಷಧ ಮತ್ತು ಬಂಧಿತ ಆರೋಪಿಗಳು    

ವಿಜಯಪುರ: ನಕಲಿ ಕ್ರಿಮಿನಾಶಕ ತಯಾರಿಕಾ ಘಟಕದ ಮೇಲೆ ಕೃಷಿ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿಯಾಗಿ ದಾಳಿ ನಡೆಸಿ ₹1,36,98,523 ಮೌಲ್ಯದ ‘ಲೈಫ್‌ ಆಗ್ರೋ ಕೆಮಿಕಲ್’ ಹೆಸರಿನ ನಕಲಿ ಕ್ರಿಮಿನಾಶಕ ಔಷಧ ವಶಪಡಿಸಿಕೊಂಡಿದ್ದಾರೆ.

ವಿಜಯಪುರ ಕೆಐಎಡಿಬಿಯಲ್ಲಿರುವ ಗೋದಾಮಿನ ಮೇಲೆ ದಾಳಿ ನಡೆಸಿ, ಜಿಲ್ಲೆಯ ಕೊಂಡಗೂಳಿ ಗ್ರಾಮದ ವಿದ್ಯಾಸಾಗರ ಮಲ್ಲಾಬಾದಿ (42) ಮತ್ತು ಕಲಬುರ್ಗಿ ಜಿಲ್ಲೆ ಬೊಳನಿ ಗ್ರಾಮದ ಅಮರ ರೆಡ್ಡಿ (19) ಎಂಬುವವರನ್ನು ಬಂಧಿಸಿದ್ದಾರೆ.

ಆರೋಪಿಗಳು ‘ಗೋಲ್ಡನ್ ಡ್ರಾಪ್ ಕ್ರಾಪ್ ಪ್ರೋಟೆಕ್ಷನ್’ ಎನ್ನುವ ಕಂಪನಿಯ ಬೋರ್ಡ್ ಹಾಕಿಕೊಂಡು ಗೋದಾಮಿನಲ್ಲಿ ತಾವೇ ಅನಧಿಕೃತವಾಗಿ ತಯಾರಿಸಿದ ನಕಲಿ ಕ್ರಿಮಿನಾಶಕ ಔಷಧಗಳಿಗೆ ‘ಲೈಫ್‌ ಆಗ್ರೋ ಕೆಮಿಕಲ್’ ಕಂಪನಿಯ ಲೇಬಲ್‌ಗಳನ್ನು ಅಂಟಿಸಿ, ಸಂಗ್ರಹಿಸಿಟ್ಟುಕೊಂಡು ಮಾರಾಟ ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾರೆ‘ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.

ADVERTISEMENT

ಎಪಿಎಂಸಿ ಪೊಲೀಸ್ ಠಾಣೆ ಪಿಎಸ್‌ಐ ಬಸವರಾಜ ಎ.ತಿಪರಡ್ಡಿ, ಸಹಾಯಕ ಕೃಷಿ ನಿರ್ದೇಶಕ ಅಮಗೊಂಡ ಬಿರಾದಾರ, ಸಹಾಯಕ ಕೃಷಿ ನಿರ್ದೇಶಕಿ ರೇಷ್ಮಾ ಸುತಾರ ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.