ADVERTISEMENT

ಕಬ್ಬಿನ ಹೊಲಕ್ಕೆ ಬೆಂಕಿ: ಆರಿಸಲು ಹೋದ ರೈತ ಸಜೀವ ದಹನ

​ಪ್ರಜಾವಾಣಿ ವಾರ್ತೆ
Published 16 ಜನವರಿ 2026, 15:55 IST
Last Updated 16 ಜನವರಿ 2026, 15:55 IST
<div class="paragraphs"><p>ಮಲ್ಲನಗೌಡ ಬಿರಾದಾರ</p></div>

ಮಲ್ಲನಗೌಡ ಬಿರಾದಾರ

   

ವಿಜಯಪುರ: ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬನಹಟ್ಟಿ ಪಿಎ ಗ್ರಾಮದಲ್ಲಿ ಶುಕ್ರವಾರ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬಿದ್ದ ಬೆಂಕಿಯನ್ನು ಆರಿಸಲು ಹೋದ ರೈತರೊಬ್ಬರು ಸಜೀವ ದಹನವಾಗಿದ್ದಾರೆ. 

ಮಲ್ಲನಗೌಡ ಬಿರಾದಾರ(62) ಸಜೀವ ದಹನವಾಗಿರುವ ರೈತ ಎಂದು ಗುರುತಿಸಲಾಗಿದೆ. ತಮ್ಮ ಕಬ್ಬಿನ ಹೊಲಕ್ಕೆ ಆಕಸ್ಮಿಕವಾಗಿ ಬೆಂಕಿ ಬಿದ್ದಿದೆ. ಈ ವೇಳೆ ಬೆಳೆಯನ್ನು ರಕ್ಷಿಸಲು ಬೆಂಕಿ ಆರಿಸಲು ಪ್ರಯತ್ನಿಸುವಾಗ ಬೆಂಕಿ ತಗುಲಿ ಸುಟ್ಟು ಹೋಗಿದ್ದಾರೆ.

ADVERTISEMENT

ಸ್ಥಳಕ್ಕೆ ದೇವರಹಿಪ್ಪರಗಿ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.