ADVERTISEMENT

ದಯಾ ಮರಣಕ್ಕೆ ಸಿಎಂಗೆ ರೈತನ ಮನವಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2018, 12:04 IST
Last Updated 5 ಡಿಸೆಂಬರ್ 2018, 12:04 IST

ವಿಜಯಪುರ: ‘ಎರಡು ಎಕರೆಯಲ್ಲಿನ 600 ದಾಳಿಂಬೆ ಗಿಡಗಳು ಒಣಗಲಾರಂಭಿಸಿವೆ. ₹ 3 ಲಕ್ಷ ಸಾಲ ಮಾಡಿ ಟ್ಯಾಂಕರ್‌ನಿಂದ ನೀರು ಹಾಕಿದರೂ ಪ್ರಯೋಜನವಾಗಿಲ್ಲ. ನನ್ನ ಜಮೀನಿಗೆ ನೀರು ಕೊಡಿ. ಇಲ್ಲದಿದ್ದರೆ ದಯಾ ಮರಣ ಕಲ್ಪಿಸಿ’ ಎಂದು ಶಿರನಾಳ ಗ್ರಾಮದ ರೈತ ಭೀಮಣ್ಣ ಗುರುಲಿಂಗಪ್ಪ ಬಬಲಾದ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದಾರೆ.

‘ನನ್ನ ಸಮಸ್ಯೆ ಹೊತ್ತು ನಾಗಠಾಣ ವಿಧಾನಸಭಾ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ ಭೇಟಿಯಾಗಿ ಮನವಿ ಮಾಡಿದರೂ; ಸ್ಪಂದಿಸುತ್ತಿಲ್ಲ. ನೀರಿನ ಕೊರತೆ ದಿನೇ ದಿನೇ ಹೆಚ್ಚುತ್ತಿದ್ದು, ನೀವಾದರೂ ನನ್ನ ಜಮೀನಿಗೆ ನೀರಿನ ಸಂಪರ್ಕ ಕಲ್ಪಿಸಿಕೊಡಿ’ ಎಂದು ಮೊರೆಯಿಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT