ADVERTISEMENT

ಬೈರಗೊಂಡಗೆ ಬಿಇಒ ಸನ್ಮಾನ!

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2019, 15:02 IST
Last Updated 10 ಸೆಪ್ಟೆಂಬರ್ 2019, 15:02 IST
ಚಡಚಣ ಸಮೀಪದ ಕೆರೂರ ಗ್ರಾಮದ ಬೈರವನಾಥ ಶಿಕ್ಷಣ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹಾದಿಮನಿ ಅವರು ಸಂಸ್ಥೆಯ ಅಧ್ಯಕ್ಷ ಮಹಾದೇವ ಬೈರಗೊಂಡ ಅವರನ್ನು ಸನ್ಮಾನಿಸಿದರು
ಚಡಚಣ ಸಮೀಪದ ಕೆರೂರ ಗ್ರಾಮದ ಬೈರವನಾಥ ಶಿಕ್ಷಣ ಸಂಸ್ಥೆಗೆ ಮಂಗಳವಾರ ಭೇಟಿ ನೀಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹಾದಿಮನಿ ಅವರು ಸಂಸ್ಥೆಯ ಅಧ್ಯಕ್ಷ ಮಹಾದೇವ ಬೈರಗೊಂಡ ಅವರನ್ನು ಸನ್ಮಾನಿಸಿದರು   

ಚಡಚಣ: ಇಲ್ಲಿಗೆ ಸಮೀಪದ ಕೆರೂರ ಗ್ರಾಮದ ಬೈರವನಾಥ ಪ್ರೌಢಶಾಲೆಯ ಅಧ್ಯಕ್ಷ ಮಹಾದೇವ ಬೈರಗೊಂಡ ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ ಹಾದಿಮನಿ ಮಂಗಳವಾರ ಸನ್ಮಾನಿಸಿದ್ದು, ಆ ಫೋಟೊ ಮತ್ತು ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಶಿವಾನಂದ ಹಾದಿಮನಿ, ‘ಭೈರವನಾಥ ಪ್ರೌಢಶಾಲೆಗೆ ಸರ್ಕಾರ ಎರಡು ವರ್ಷಗಳಿಂದ ಅನುದಾನ ಸ್ಥಗಿತಗೊಳಿಸಿತ್ತು. ಕರ್ನಾಟಕ ಆಡಳಿತಾತ್ಮಕ ನ್ಯಾಯಾಲಯ (ಕೆಎಟಿ)ವು ಅನುದಾನ ಮುಂದುವರಿಸುವಂತೆ ಆದೇಶಿಸಿದ್ದರಿಂದ, ಶಾಲೆಯ ಮೂಲ ಸೌಕರ್ಯ ಪರಿಶೀಲನೆಗೆ ಬಂದಿದ್ದೆ. ಈ ವೇಳೆ ಬೈರಗೊಂಡ ನನ್ನನ್ನು ಸನ್ಮಾನಿಸಿದರು. ಪ್ರತಿಯಾಗಿ ನಾನು ಅಲ್ಲಿಯೇ ಇದ್ದ ಹೂವಿನ ಹಾರ, ಶಾಲು ಹೊದೆಸಿ ಅವರನ್ನು ಸನ್ಮಾನಿಸಿದೆ. ಇದಕ್ಕೆ ಯಾವುದೇ ಅರ್ಥ ಕಲ್ಪಿಸುವ ಅಗತ್ಯವಿಲ್ಲ’ ಎಂದು ತಿಳಿಸಿದರು.

ಭೀಮಾ ತೀರದ ಎರಡು ಕೊಲೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿ, ಈಚೆಗೆ ಜಾಮೀನಿನ ಮೇಲೆ ಬಿಡುಗಡೆಯಾಗಿರುವ ಬೈರಗೊಂಡಗೆ ಏಷಿಯನ್ ಇಂಟರ್‌ನ್ಯಾಷನಲ್‌ ಇಂಡೋನೇಷಿಯಾ ವಿಶ್ವವಿದ್ಯಾಲಯವು ಈಚೆಗೆ ಗೌರವ ಡಾಕ್ಟರೇಟ್‌ ಪದವಿ ನೀಡಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.