ADVERTISEMENT

ಹಲಸಂಗಿ: ಜಾನಪದ ಸಾಹಿತ್ಯದ ಹೆಬ್ಬಾಗಿಲು; ಮೇತ್ರಿ‌

ಮಧುರಚೆನ್ನರ 122ನೇ ಜನ್ಮ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2025, 5:56 IST
Last Updated 1 ಆಗಸ್ಟ್ 2025, 5:56 IST
31ಸಿಡಿಎನ್01ಚಡಚಣ ಸಮೀಪದ  ಹಲಸಂಗಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ ಮಧುರಚೆನ್ನರ 122 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ  ಅರವಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಮನಮಿ ಉದ್ಘಾಟಿಸಿದರು.
31ಸಿಡಿಎನ್01ಚಡಚಣ ಸಮೀಪದ  ಹಲಸಂಗಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ ಮಧುರಚೆನ್ನರ 122 ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಶ್ರೀ  ಅರವಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಮನಮಿ ಉದ್ಘಾಟಿಸಿದರು.   

ಚಡಚಣ: ಅನುಭಾವಿ ಕವಿ ಮಧುರಚೆನ್ನರ ನೇತೃತ್ವದಲ್ಲಿ ಆಧ್ಯಾತ್ಮ ಹಾಗೂ ಸಾಹಿತ್ಯವನ್ನು ಒಟ್ಟಿಗೆ ಕೊಂಡೊಯ್ದು ಜಾನಪದ ಸಾಹಿತ್ಯವನ್ನು ನಾಡಿಗೆ ನೀಡಿದ ಹಲಸಂಗಿ ಗ್ರಾಮವು ಜಾನಪದ ಸಾಹಿತ್ಯದ ತವವರೂರು ಎಂದು ಸಾಹಿತಿ ಸಂಗಮೇಶ ಮೇತ್ರಿ ಹೇಳಿದರು.

ತಾಲ್ಲೂಕಿನ ಹಲಸಂಗಿ ಗ್ರಾಮದಲ್ಲಿ ಗುರುವಾರ ಹಲಸಂಗಿ ಗೆಳೆಯರ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ ಮಧುರಚೆನ್ನರ 122ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಲಸಂಗಿ ಗೆಳೆಯರ ಬಳಗ ಸಾಮಾಜಿಕ, ಸಾಹಿತ್ಯ ಹಾಗೂ ಸ್ವಾತಂತ್ರ್ಯ ಹೋರಾಟ ಕ್ಷೇತ್ರದಲ್ಲಿ ತಮ್ಮದೇ ಆದ ಕೊಡುಗೆ ನೀಡಿದೆ. ಮಧುರಚೆನ್ನರು ಓದಿದ್ದು 3ನೇ ತರಗತಿ, ಮುಲ್ಕಿ ಪರೀಕ್ಷೆ ಪಾಸು ಮಾಡಿ, ಹಲಸಂಗಿ ಗೆಳೆಯರ ಬಳಗ ಕಟ್ಟಿಕೊಂಡು ಅತ್ಯಂತ ಕುಗ್ರಾಮವಾಗಿದ್ದ ಹಲಸಂಗಿಯಲ್ಲಿ ಕುಳಿತು 21 ಭಾಷೆಯನ್ನು ಕಲಿತಿದ್ದ ಮಧುರಚೆನ್ನರು ಹಲವಾರು ಜಾನಪದ ಕೃತಿಗಳನ್ನು ನಾಡಿಗ್ಗೆ ನೀಡಿದ್ದಾರೆ. ಅವರ ʼಗರತಿಯ ಹಾಡುʼ, ನನ್ನ ನಲ್ಲ’ ಎಂಬ ಮಧುರಚೆನ್ನರ ಕವನ ಸಂಕಲನಗಳಿಗೆ ಸರಿಸಾಟಿಯಾದ ಕವನ ಸಂಕಲನಗಳು ಇನ್ನೂ ಹುಟ್ಟಿಲ್ಲ. ಜಾನಪದ ಸಾಹಿತ್ಯದ ಕವನ ಸಂಕಲನಗಳನ್ನು ಹಲವಾರು ವಿಶ್ವ ವಿದ್ಯಾಲಯಗಳೂ ಇನ್ನೂ ವಿಮರ್ಶೆ ಮಾಡುವಲ್ಲಿ ಸಫಲವಾಗಿಲ್ಲ. ಅರವಿಂದ ತತ್ವ ಜ್ಞಾನವನ್ನು ಮರಳಿ ಕೊಟ್ವವರು ಮಧುರಚೆನ್ನರು ಎಂದ ಅವರು, ಹಲಸಂಗಿ ಗ್ರಾಮದಲ್ಲಿ ಮಧುರಚೆನ್ನರ ಭವನವಾಗಲಿ,ಸ್ಮಾರಕವಾಗಲಿ ನಿರ್ಮಾಣಗೊಳ್ಳದಿರುವದು ಖೇದದ ಸಂಗತಿ ಎಂದರು.

ADVERTISEMENT

ಕಂದಾಯ ಉಪ ವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡಿ, ಅನುಭಾವ ಕವಿ ಮಧುರಚೆನ್ನರೂ ಸೇರಿದಂತೆ ನಾಡಿನ ಸುಪ್ರಸಿದ್ಧ ಕವಿಗಳ ಪರಿಚಯ,ಸಾಹಿತ್ಯವನ್ನು ಇಂದಿನ ಪೀಳಿಗೆಗೆ ಉಣಬಡಿಸಬೇಕಿದೆ. ಕನ್ನಡ ಸಾಹಿತ್ಯದಲ್ಲಿ ಅದ್ಭುತ ಕಾವ್ಯಗಳಿವೆ. ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಜಾನಪದ ಸಾಹಿತ್ಯ ಇರುವದರಿಂದ ಅದು ಜನಪ್ರಿಯವಾಗಿವೆ. ವಿದ್ಯಾರ್ಥಿಗಳಿಗೆ ಪಠ್ಯದೊಂದಿಗೆ ಕನ್ನಡ ನಾಡು, ನುಡಿ ಸಾಹಿತ್ಯದ ಅರಿವು ಮೂಡಿಸುವದು ಇಂದಿನ ಅಗತ್ಯತೆಯಾಗಿದೆ ಎಂದರು.

ಪ್ರಾಸ್ತಾವಿಕವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಂತೋಷ ಭೋವಿ ಮಾತನಾಡಿ, ವಾರ್ಷಿಕ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಅರವಿಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಅರವಿಂದ ಮನಮಿ,ಅಧ್ಯಕ್ಷತೆ ವಹಿಸಿದ ಶ್ರೀ ಅರವಿಂದ ಸಂಯುಕ್ತ ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಡಿ.ಬಿ.ತಿಕೋಟಿ ಮಾತನಾಡಿದರು.

ವೇದಿಕೆಯ ಮೇಲೆ ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ಪುಲಕೇಶಿ ಗಲಗಲಿ, ವಿ.ಡಿ.ಐಹೊಳ್ಳಿ, ಬಿ.ಆರ್‌.ಬನಸೋಡೆ,ದ್ರಾಕ್ಷಾಯಿಣಿ ಬಿರಾದಾರ,ರಮೇಶ ಕತ್ತಿ,ಮುಖ್ಯ ಶಿಕ್ಷಕ ಬಿ.ಬಿ.ಹೊನಮಾನೆ ಇದ್ದರು,

ಉಪನ್ಯಾಸಕ ಸಿ.ಎ.ಬಗಲಿ ಕಾರ್ಯಕ್ರಮ ನಡೆಸಿಕೊಟ್ಟರು. ಕಾರ್ಯಕ್ರಮಕ್ಕೂ ಮೊದಲು ಹಾಗೂ ನಂತರ ಗಾಯಕಿ ಮಂಜುಳಾ ಹಿಪ್ಪರಗಿ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.