ಮುದ್ದೇಬಿಹಾಳ: ದೇಶಕ್ಕೆ ಸ್ವಾತಂತ್ರ್ಯ ತಂದುಕೊಡಲು ಹೋರಾಡಿದ ಮಹಾತ್ಮ ಗಾಂಧೀಜಿ, ರೈತ, ಸೈನಿಕ ದೇಶದ ಬೆನ್ನೆಲುಬು ಎಂದು ಸಾರಿದ ಲಾಲ್ ಬಹಾದ್ದೂರ ಶಾಸ್ತ್ರಿ ಆದರ್ಶ ಅನುಕರಣೀಯ ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಆವರಣದಲ್ಲಿ ಗುರುವಾರ ನಾಯಕರ ಭಾವಚಿತ್ರದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು.
ತಹಶೀಲ್ದಾರ್ ಕೀರ್ತಿ ಚಾಲಕ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪಿಎಸ್‌ಐ ಸಂಜಯ ತಿಪರೆಡ್ಡಿ, ವಿವಿಧ ಇಲಾಖೆಯ ಅಧಿಕಾರಿಗಳಾದ ಎಸ್.ಡಿ.ಭಾವಿಕಟ್ಟಿ, ಬಸನಗೌಡ ಬಿರಾದಾರ, ಬಿ.ಎಸ್.ಸಾವಳಗಿ, ಶಿವಾನಂದ ಮೇಟಿ,ಅರವಿಂದ ಹೂಗಾರ, ಮಲ್ಲನಗೌಡ ಬಿರಾದಾರ,ಪವನ್ ತಳವಾರ,ಎಂ.ಎA.ಬೆಳಗಲ್ಲ, ಖೂಭಾಸಿಂಗ ಜಾಧವ,ಪ್ರವೀಣ ಸುಣಕಲ್ ,ಪುರಸಭೆ ಸದಸ್ಯರು,ದಲಾದವರು ಇದ್ದರು.
ಪಟ್ಟಣದ ತಹಶೀಲ್ದಾರ್ ಕಚೇರಿಯಿಂದ ನೇತಾಜಿ ನಗರದಲ್ಲಿರುವ ದೇವಸ್ಥಾನದವರೆಗೆ ಗಾಂಧೀಜಿ, ಶಾಸ್ತ್ರಿ ಅವರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು. ಮೆರವಣಿಗೆಯಲ್ಲಿ ಆರ್.ಎಂ.ಎಸ್.ಎ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.