ADVERTISEMENT

ವಿಜಯಪುರ | ಗಣೇಶ ವಿಸರ್ಜನೆ: ಗಮನ ಸೆಳೆದ ಕಲಾಕೃತಿಗಳು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 6:14 IST
Last Updated 5 ಸೆಪ್ಟೆಂಬರ್ 2025, 6:14 IST
ಆಲಮೇಲ ಪಟ್ಟಣದಲ್ಲಿ ರವಿವಾರ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ವೆಲ್ಲೂರು ಗೋಲ್ಡನ್ ಟೆಂಪಲ್ ಸ್ತಬ್ಧಚಿತ್ರ ಗಮನ ಸೆಳೆಯಿತು
ಆಲಮೇಲ ಪಟ್ಟಣದಲ್ಲಿ ರವಿವಾರ ನಡೆದ ಗಣೇಶ ವಿಸರ್ಜನೆ ಕಾರ್ಯಕ್ರಮದಲ್ಲಿ ವೆಲ್ಲೂರು ಗೋಲ್ಡನ್ ಟೆಂಪಲ್ ಸ್ತಬ್ಧಚಿತ್ರ ಗಮನ ಸೆಳೆಯಿತು   

ಆಲಮೇಲ: ಪಟ್ಟಣದಲ್ಲಿ ಭಾನುವಾರ ರಾತ್ರಿ ಎಲ್ಲ16 ಗಣೇಶ ಚೌಕಿನ ಗಣೇಶ ವಿಗ್ರಹಗಳನ್ನು ಪುಣೆಯ ಗಣೇಶ ವಿಸರ್ಜನೆ ಮೆರವಣಿಗೆ ಮಾದರಿಯಲ್ಲಿ ವಿಸರ್ಜನೆ ಮಾಡಲಾಯಿತು.

ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಜಾನಪದ ಕಲಾ ತಂಡಗಳು ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಎರಡು ಕಡೆ‌ ಭವ್ಯ ವೇದಿಕೆಗಳನ್ನು ನಿರ್ಮಿಸಲಾಗಿತ್ತು, ಶಾಸಕ ಅಶೋಕ‌ ಮನಗೂಳಿ ಮೆರವಣಿಗೆಗೆ ಚಾಲನೆ‌ ನೀಡಿದರು. ಮೂರು ಕಡೆಗಳಲ್ಲಿ ರಾತ್ರಿಯಿಡಿ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಆಲಮೇಲದಲ್ಲಿ ಆಚರಿಸಲಾಗುವ ಗಣೇಶೋತ್ಸವಕ್ಕೆ ನಾಲ್ಕು ದಶಕಗಳ ಇತಿಹಾಸವಿದೆ. ಅಪಾರ ಸಂಖ್ಯೆಯಲ್ಲಿ ಜನರು ಗಣೇಶ ಮೂರ್ತಿಗಳನ್ನು ನೋಡಲು ಬರುವುದರ ಜೊತೆಗೆ ವಿಸರ್ಜನಾ ಮೆರವಣಿಗೆಯಲ್ಲೂ ಭಾಗವಹಿಸುತ್ತಾರೆ.

ADVERTISEMENT

ಗಮನ ಸೆಳೆದ‌ ಸ್ತಬ್ಧಚಿತ್ರ, ಕಲಾಕೃತಿಗಳ ಮೆರಗು:

ವಿಸರ್ಜನೆ ಮೆರವಣಿಗೆಯಲ್ಲಿ ಅನೇಕ ಕಲಾಕೃತಿಗಳು ಗಮನ ಸೆಳೆದವು. ಗಣೇಶ ನಗರದ ಮಂಡಳಿಯಿಂದ ಹಣಮಂತ ಶಿವನನ್ನು ಪೂಜಿಸುವ ಸ್ಥಬ್ಧ ಚಿತ್ರ, ಬಸವನಗರದ ಮಂಡಳಿಯಿಂದ ವಾಸುದೇವ ಮತ್ತು ಕೃಷ್ಣ, ಮುಳಮಠ ಮಂಡಳದ ವತಿಯಿಂದ ಆರ್‌ಸಿಬಿಯ ಕಪ್ ಪಡೆದ ಸಂಭ್ರಮದ ಚಿತ್ರ, ಜೈ ಭಾವನಿ ಮಂಡಳದಿಂದ ಉಗ್ರನರಸಿಂಹ, ಭವಾನಿ ಕಟ್ಟಿಯಿಂದ ವಿಷ್ಣುವಿನ ರೂಪ, ದತ್ತನಚೌಕ ವೆಲ್ಲೂರು ಗೋಲ್ಡನ್ ಟೆಂಪಲ್‌, ರಾಘವೇಂದ್ರ ಚೌಕ ಫಂಡರಾಪುರದ ವಿಠಲ, ಸಾವಳಗಿ ಲಿಂಗೇಶ್ವರ ಚೌಕ ಗಾಣದೇವತೆ, ಕಾಮನಕಟ್ಟಿ ದಿಂದ ಸೋಲ್ಲಾಪೂರದ ಸಿದ್ದರಾಮೇಶ್ವರ, ವೀರಭದ್ರಶೇಶ್ವರ ಚೌಕದಿಂದ ಕಾಮಕ್ಯದೇವಿ, ಗಾಂಧಿ ಚೌಕದಿಂದ ಭದ್ರಕಾಳಿ ಹೀಗೇ ಅನೇಕ ಬಗೆಯ ಸನ್ನಿವೇಶಗಳ ಕಲಾಕೃತಿಗಳು ನೋಡುಗರನ್ನು ರಂಜಿಸಿದವು.

ಆರ್ ಸಿ ಬಿ ವಿಜಯೋತ್ಸವ ಸ್ತಬ್ಧಚಿತ್ರ
ರೈತಬಂಧು ಸ್ತಬ್ಧ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.