ಶಿವಾಜಿ
ವಿಜಯಪುರ: ನಗರದಲ್ಲಿ ಮಂಗಳವಾರ ತಡರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ವಿದ್ಯುತ್ ಅವಘಡ ಸಂಭವಿಸಿ ಯುವಕನೊಬ್ಬ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ವಿಜಯಪುರ ನಗರದ ರಾಮಪ್ರಸಾದ ಗಲ್ಲಿ ನಿವಾಸಿಯಾಗಿದ್ದ ಶಿವಾಜಿ ಅಲಿಯಾಸ್ ಶುಭಂ ಸಕ್ಪಾಲ್(21) ವಿದ್ಯುತ್ ತಗುಲಿ ಸಾವಿಗೀಡಾಗಿದ್ದಾರೆ. ಲಖನ್ ಚವ್ಹಾಣ ಮತ್ತು ಪ್ರಭು ಜಗತೆ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮರಾಠ ಸಮಾಜದಿಂದ ಡೋಬಳೆ ಗಲ್ಲಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿಯನ್ನು ಮಂಗಳವಾರ ತಡರಾತ್ರಿ ವಿಸರ್ಜನೆಗಾಗಿ ಮೆರವಣಿಗೆ ಮೂಲಕ ಕೊಂಡೊಯ್ಯುವಾಗ ನಗರದ ಗಾಂಧಿಚೌಕಿ ಬಳಿ ಗಣಪತಿ ಮೂರ್ತಿ ಕೂರಿಸಿದ್ದ ವಾಹನಕ್ಕೆ ಹಾಗೂ ಡಿಜೆ ಸಿಸ್ಟಿಂಗೆ ವಿದ್ಯುತ್ ತಂತಿ ತಗಲದಂತೆ ಕೋಲಿನಿಂದ ಎತ್ತಿಹಿಡಿದುಕೊಂಡಿದ್ದ ವೇಳೆ ಯುವಕರಿಗೆ ವಿದ್ಯುತ್ ತಂತಿ ತಗುಲಿ ಅವಘಡ ಸಂಭವಿಸಿದೆ. ಈ ಕುರಿತು ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.