
ತಾಳಿಕೋಟೆ: ಪಟ್ಟಣದ ಗಣೇಶ ನಗರದ ನಿವಾಸಿ ಹೆಸ್ಕಾಂ ಉದ್ಯೋಗಿ ರವಿ ಕೋಳೂರ (ಬಿಂಜಲಭಾವಿ) ಅವರ ಮನೆಯಲ್ಲಿ ಮಧ್ಯಾಹ್ನ 1 ಗಂಟೆ ಸಮಯದಲ್ಲಿ ಗ್ಯಾಸ್ ಸೋರಿಕೆಯಿಂದ ಸ್ಫೋಟಗೊಂಡು ಮನೆ ಸಂಪೂರ್ಣ ಹಾನಿ ಆಗಿದೆ.
ಯಾವುದೇ ರೀತಿಯ ಪ್ರಾಣ ಹಾನಿ ಸಂಭವಿಸಿಲ್ಲ. ಸ್ಪೋಟದ ತೀವ್ರತೆಗೆ ಇಡೀ ಮನೆ ಬಿರುಕು ಬಿಟ್ಟಿದ್ದು ಸ್ಪೋಟದಿಂದಾಗಿ ಆಗಬಹುದಿದ್ದ ಹೆಚ್ಚಿನ ಅನಾಹುತವನ್ನು ಸಮಯಕ್ಕೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ತಂಡದವರು ತಡೆದಿದ್ದಾರೆ.
ಗ್ಯಾಸ್ ಸೋರಿಕೆಯಿಂದ ಆದ ಅಗ್ನಿ ಅವಘಡದಲ್ಲಿ ಮನೆ, ಸಂಪೂರ್ಣ ನಾಶವಾಗಿದ್ದು ಮನೆಯಲ್ಲಿದ್ದ ₹3.8 ಲಕ್ಷ ನಗದು ಹಣ ಸಹಿತ ಪ್ರಮುಖ ದಾಖಲೆ ಪತ್ರಗಳು ಸುಟ್ಟು ಕರಗಲಾಗಿವೆ. ಒಟ್ಟು ₹50 ಲಕ್ಷದಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.
ಘಟನೆ ಸಂದರ್ಭದಲ್ಲಿ ಮನೆಯಲ್ಲಿ ಯಾರೂ ಇರಲಿಲ್ಲ. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಡಾ. ವಿನಯಾ ಹೂಗಾರ್ ಹಾಗೂ ಠಾಣಾ ಪಿಎಸ್ಐ ಜ್ಯೋತಿ ಖೋತ್ ಭೇಟಿ ನೀಡಿ ವರದಿ ಪಡೆದುಕೊಂಡು ತನಿಖೆ ಮುಂದುವರಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.