ADVERTISEMENT

ಗುಡ್ಡಾಪುರ ದಾನಮ್ಮದೇವಿ ಜಾತ್ರೆ ಡಿ.1ರಿಂದ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2021, 12:14 IST
Last Updated 24 ನವೆಂಬರ್ 2021, 12:14 IST
ಗುಡ್ಡಾಪುರ ದಾನಮ್ಮದೇವಿ
ಗುಡ್ಡಾಪುರ ದಾನಮ್ಮದೇವಿ   

ವಿಜಯಪುರ: ನೆರೆಯ ಮಹಾರಾಷ್ಟ್ರದ ಸುಕ್ಷೇತ್ರಗುಡ್ಡಾಪುರ ದಾನಮ್ಮದೇವಿ ಜಾತ್ರೆ ಡಿಸೆಂಬರ್‌ 1 ರಿಂದ 5 ರವರೆಗೆ ಜರುಗಲಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಜಾತ್ರೆಯಲ್ಲಿ ಯಾವುದೇ ಅದ್ದೂರಿ ಇರುವುದಿಲ್ಲ. ಭಕ್ತರು ಸಹಕರಿಸಬೇಕು ಎಂದು ದಾನಮ್ಮದೇವಿ ಟ್ರಸ್ಟ್ ಕಮಿಟಿ ತಿಳಿಸಿದೆ.

ಪಾದಯಾತ್ರೆ, ಮೂಲಕ ಬಂದ ಭಕ್ತರು ವಾಸ್ತವ್ಯ ಮಾಡುವಂತಿಲ್ಲ, ಅನ್ನದಾಸೋಹಕ್ಕೆ ಅವಕಾಶವಿಲ್ಲ, ಜಡೆ ತೆಗೆಯುವುದು ಸೇರಿದಂತೆ ಯಾವುದೇ ಧಾರ್ಮಿಕ ಕಾರ್ಯಕ್ರಮಗಳು ನಡೆಸುವಂತಿಲ್ಲ, ಅಭಿಷೇಕ, ತೀರ್ಥ, ಮುಟ್ಟಿ ದರ್ಶನ ಮಾಡುವುದು, ವಾಸ್ತವ್ಯಕ್ಕೆ ಕೊಠಡಿಗಳ ಬಾಡಿಗೆ ಕೊಡುವುದು ರದ್ದಾಗಿರುತ್ತದೆ ಎಂದು ತಿಳಿಸಿದೆ.

ADVERTISEMENT

ದೇವಸ್ಥಾನದ ವ್ಯಾಪ್ತಿಯ ಪ್ರದೇಶದಲ್ಲಿ ಯಾರೂ ಬಿಡಾರ ಹೂಡುವುದು ವಾಸ್ತವ ಇರುವುದು, ಅಡಿಗೆ ಮಾಡುವುದು, ತೆಂಗಿನ ಕಾಯಿ ಒಡೆಯುವುದು, ಗುಡಾರ ಅಂಗಡಿಗಳನ್ನು ಹಾಕುವುದನ್ನು ಕಡ್ಡಾಯವಾಗಿ ನಿಷೇಧಿಸಿದೆ.

ಕೇವಲ ದೇವಿ ದರ್ಶನ ಮಾಡಿ, ಮರಳಿ ತಮ್ಮ ಊರುಗಳಿಗೆ ತೆರಳಬೇಕು. ಮಾಸ್ಕ್‌, ಸ್ಯಾನಿಟೈಜರ್ ಬಳಕೆ ಕಡ್ಡಾಯವಾಗಿದೆ. ಕಾನೂನು ಉಲ್ಲಂಘಿಸಿದರೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್‌ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.