ADVERTISEMENT

ಗುಂಟಾ ಲೇಔಟ್: ಕಾನೂನು ಕ್ರಮ

ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2020, 14:51 IST
Last Updated 11 ಡಿಸೆಂಬರ್ 2020, 14:51 IST

ವಿಜಯಪುರ: ಸಾರ್ವಜನಿಕರು ಗುಂಟಾ ಲೇಔಟ್ ಮಾಡುವುದಾಗಲಿ, ಗುಂಟಾ ನಿವೇಶನ ಮಾರಾಟ ಮಾಡುವುದಾಗಲಿ, ನಿವೇಶನಗಳನ್ನು ಖರೀದಿ ಮಾಡುವುದಾಗಲಿ ಹಾಗೂ ಅಂತಹ ನಿವೇಶನಗಳಲ್ಲಿ ಕಟ್ಟಡ ಕಟ್ಟುವುದಾಗಲಿ ಮಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರಿದ ಆಯುಕ್ತರು ಮತ್ತು ಅಧ್ಯಕ್ಷರು ಎಚ್ಚರಿಕೆ ನೀಡಿದ್ದಾರೆ.

ಗುಂಟಾ ನಿವೇಶನಗಳನ್ನು ತಡೆಯಲು ಜಿಲ್ಲಾಡಳಿತದಿಂದ ಟಾಸ್ಕ್‌ ಫೋರ್ಸ್ ರಚಿಸಲಾಗಿದ್ದು, ಈ ಕಮಿಟಿಯು ಅನಧಿಕೃತ ಗುಂಟಾಗಳನ್ನು ರಚನೆ ಮಾಡಿ ಮಾರುವವರ ಮೇಲೆ ಹಾಗೂ ಖರೀದಿ ಮಾಡಿದವರ ಮೇಲೆ ಕಾನೂನು ರಹಿತ ಕ್ರಮ ಅಂದರೆ, ಗುಂಟಾ ಲೇಔಟ್‍ಗಳನ್ನು ಮತ್ತು ನಿವೇಶನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಹಾಗೂ ಈಗಾಗಲೇ ಕಟ್ಟಡ ನಿರ್ಮಿಸಿದ್ದರೆ ಕಟ್ಟಡಗಳನ್ನು ನೆಲಸಮ ಮಾಡಲಾಗುವುದು ಎಂದು ಹೇಳಿದರು.

ಶೇತ್ಕಿ ಜಮೀನುಗಳನ್ನು ತುಂಡುತುಂಡಾಗಿ ಅಂದರೆ, ಗುಂಟಾ ನಿವೇಶನ ರಚಿಸಿ ಮಾರಾಟ ಮಾಡುತ್ತಿರುವುದು ಕಂದಾಯ ಇಲಾಖೆ ಹಾಗೂ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಗಳನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಇಂತಹ ಗುಂಟಾ ನಿವೇಶನಗಳನ್ನು ರಚಿಸುವುದಾಗಲಿ, ಮಾರಾಟ ಮಾಡುವುದಾಗಲಿ, ಖರೀದಿ ಮಾಡುವುದಾಗಲಿ ಕಾನೂನು ಬಾಹಿರವಾಗಿದೆ ಎಂದು ಅವರು ಜಂಟಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.