ADVERTISEMENT

ಹಳಗುಣಕಿ ಹನುಮಂತ ಜಾತ್ರೆ ಆರಂಭ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 13:50 IST
Last Updated 8 ಏಪ್ರಿಲ್ 2025, 13:50 IST
ಹೊರ್ತಿ ಸಮೀಪದ ಹಳಗುಣಕಿ ಗ್ರಾಮದ ಹನುಮಾನ ಪ್ರಾಣ ದೇವರು
ಹೊರ್ತಿ ಸಮೀಪದ ಹಳಗುಣಕಿ ಗ್ರಾಮದ ಹನುಮಾನ ಪ್ರಾಣ ದೇವರು   

ಹೊರ್ತಿ: ಸಮೀಪದ ಹಳಗುಣಕಿ ಗ್ರಾಮದ ಹನುಮಾನ ದೇವರ ದೇವಸ್ಥಾನ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.

ಐತಿಹಾಸಿಕ ಹಿನ್ನೆಲೆ: ಗ್ರಾಮದ ಪ್ರಾಣ ದೇವರಾದ ಮಾರುತೇಶ್ವರನು ಏಳು ಊರಿನ ರಸ್ತೆಗಳ ಮಾರ್ಗದ ಮದ್ಯದಲ್ಲಿದೆ. 1 ಎಕರೆ ಜಮೀನಿನಲ್ಲಿ 18ನೇ ಶತಮಾನದಲ್ಲಿ ವಾಮನಾಚಾರ್ಯ ಎಂಬುವರು ನಿರ್ಮಾಣ ಮಾಡಿದ್ದಾರೆ. ಶಿವಾನುಭವ ಮಂಟಪ, ಮಾತೋಶ್ರೀ ರತ್ನಮಾಲಾ ಭೋಜನಾಲಯ, ಹಳೆ ಬಾವಿ, 53 ಅಡಿತ್ತರದ ದೀಪಸ್ಥಂಭವಿದೆ. ಭಕ್ತರ ಶೃದ್ಧಾ, ಭಕ್ತಿ, ಭಾವಗಳ ಕೇಂದ್ರವಾಗಿದೆ.

ಮಂಗಳವಾರದಿಂದ ಜಾತ್ರೆ ಆರಂಭಗೊಂಡಿದ್ದು, ಬೆಳಿಗ್ಗೆ ಭಕ್ತರಿಂದ ದೀರ್ಘದಂಡ ನಮಸ್ಕಾರ, ಊರ ಗೌಡರ ನೇತೃತ್ವದಲ್ಲಿ ವಿವಿದ ಕಲಾ ವಾದ್ಯ ಮೇಳಗಳೊಂದಿಗೆ ವಾಡೆಯಿಂದ ಮೊಸರು ಗಡಿಗೆ ಮೆರವಣಿಗೆ, ನಂತರ ಅನ್ನಸಂತರ್ಪಣೆ, ರಾತ್ರಿ 8 ಮದ್ದು ಸುಡುವ ಕಾರ್ಯಕ್ರಮ, 28ಕ್ಕೂ ಹೆಚ್ಚು ಜಂಗೀ ನಿಕಾಲಿ ಕುಸ್ತಿ ನಡೆದವು.

ADVERTISEMENT

ರಾತ್ರಿ 10ಕ್ಕೆ ಬಾಗಲಕೋಟೆಯ ಶ್ರೀ ಗುರು ಪುಟ್ಟರಾಜ ಕೃಪಾಪೋಷಿತ ಕಲಾ ನಾಟ್ಯ ಸಂಘದವರಿಂದ 'ಧರ್ಮದ ದಾರಿಯಲ್ಲಿ ಕರ್ಮದ ಬಿರುಗಾಳಿ' ಅರ್ಥಾತ್ ನೀತಿಗೆಟ್ಟ ಸಮಾಜ ಎಂಬ ನಾಟಕ ಪ್ರದರ್ಶನ ನಡೆಯಿತು.

ಏ.12ರಂದು ಮುಂಜಾನೆ 6:15ಕ್ಕೆ ಹನುಮಾನ ದೇವಸ್ಥಾನ ಶ್ರಿ ಹನುಮಾನ ಜಯಂತಿ ನಡೆದು ಜಾತ್ರೋತ್ಸವ ಮುಕ್ತಾಯಗೊಳ್ಳಿದೆ ಎಂದು ಹಳಗುಣಕಿ ಗ್ರಾಮದ ಹನುಮಾನ ದೇವರ ದೇವಸ್ಥಾನ ಜಾತ್ರಾ ಮಹೋತ್ಸವ ಕಮಿಟಿಯ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.