ADVERTISEMENT

ಹಲಸಂಗಿ ನಾಡಹಬ್ಬಕ್ಕೆ ಜಿಲ್ಲಾಡಳಿತದ ಸಹಯೋಗ

​ಪ್ರಜಾವಾಣಿ ವಾರ್ತೆ
Published 6 ಜುಲೈ 2020, 17:21 IST
Last Updated 6 ಜುಲೈ 2020, 17:21 IST
ವಿಜಯಪುರ ಜಿಲ್ಲಾ ಕೌಶಲ ಮಿಷನ್ ಸಮನ್ವಯ ಸಮಿತಿ ಸಭೆಯಲ್ಲಿ  ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ  ಮಾತನಾಡಿದರು
ವಿಜಯಪುರ ಜಿಲ್ಲಾ ಕೌಶಲ ಮಿಷನ್ ಸಮನ್ವಯ ಸಮಿತಿ ಸಭೆಯಲ್ಲಿ  ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ  ಮಾತನಾಡಿದರು   

ವಿಜಯಪುರ: ಪ್ರತಿ ವರ್ಷ ಹಲಸಂಗಿ ಗೆಳೆಯರ ಬಳಗದಿಂದಮಧುರ ಚನ್ನರ ಸ್ವಗ್ರಾಮ ಹಲಸಂಗಿಯಲ್ಲಿ 10 ದಿನಗಳ ನಡೆಯುವ ನಾಡಹಬ್ಬವನ್ನು ಈ ವರ್ಷದಿಂದ ಜಿಲ್ಲಾಡಳಿತದ ಸಹಯೋಗದಲ್ಲಿ ಆಚರಿಸಲಾಗುವುದು ಎಂದು ಜಿಲ್ಲಾಧಿಕಾರಿ ವೈ.ಎಸ್‌.ಪಾಟೀಲ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಹಲಸಂಗಿ ಗೆಳೆಯರ ಬಳಗ ಪ್ರತಿಷ್ಠಾನದ ಸರ್ವ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಹಲಸಂಗಿ ಗೆಳೆಯರ ಪ್ರತಿಷ್ಠಾನದಿಂದ ಮುದ್ರಣಗೊಳ್ಳುವ ಪುಸ್ತಕಗಳನ್ನು ಡಿಜಿಟಲಿಕರಣಗೊಳಿಸುವ ಪ್ರಯತ್ನ ಕೈಗೊಳ್ಳಬೇಕು. ಇದರಿಂದ ಓದುಗರಿಗೆ ಸಹಕಾರಿಯಾಗಲಿದೆ ಎಂದರು.

ADVERTISEMENT

ಪ್ರತಿಷ್ಠಾನದಿಂದ ಪ್ರಕಟವಾಗುವ ಕೃತಿಗಳ ಮುದ್ರಣ ಹಾಗೂ ಮರುಮುದ್ರಣ, ಕಾವ್ಯ, ಜಾನಪದ ವಿಮರ್ಶೆ, ಗ್ರಂಥ ಬಿಡುಗಡೆ ಹಾಗೂ ಪ್ರಶಸ್ತಿ ಸಮಾರಂಭ ಸೇರಿದಂತೆ ಹೊರ ಜಿಲ್ಲೆಗಳಲ್ಲಿ ವಿಚಾರ ಸಂಕಿರ್ಣ ನಡೆಸುವ ನಿಟ್ಟಿನಲ್ಲಿ ಕ್ರೀಯಾ ಯೋಜನೆ ಸಿದ್ಧ ಪಡಿಸಲು ಸೂಚಿಸಿದರು.

ಈ ಪ್ರತಿಷ್ಠಾನದಿಂದ ಮುದ್ರಣವಾಗುವ ಪುಸ್ತಕಗಳು ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ಕಳುಹಿಸುವ ಪ್ರಯತ್ನವಾಗಬೇಕು. ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಆಸಕ್ತಿ ಬೆಳೆಯುವಂತಾಗಬೇಕು ಎಂದರು.

ಪ್ರತಿಷ್ಠಾನದಿಂದ ಮುದ್ರಣಗೊಳ್ಳುವ ಪುಸ್ತಕಗಳು ಜನರಿಗೆ ವ್ಯಾಪಕವಾಗಿ ಸಿಗುವಂತಾಗಬೇಕು ಈ ನಿಟ್ಟಿನಲ್ಲಿ ಪುಸ್ತಕ ಮಾರಾಟ ಕೇಂದ್ರವನ್ನು ಕನ್ನಡ ಸಂಸ್ಕೃತಿ ಇಲಾಖೆಯಲ್ಲಿ ನಿರ್ಮಿಸಬೇಕು, ವಿದ್ಯಾರ್ಥಿಗಳಿಗೆ ಶೇ 50 ರಷ್ಟು ವಿನಾಯಿತಿಯಲ್ಲಿ ಪುಸ್ತಕ ಮಾರಾಟ ಮಾಡಬೇಕು. ಉಳಿದ ಪುಸ್ತಕ ಓದುವ ಹವ್ಯಾಸಿಗಳಿಗೆ ಶೇ 20ರಷ್ಟು ರಿಯಾಯಿತಿ ನೀಡಬೇಕು ಎಂದರು.

ಪ್ರತಿಷ್ಠಾನದಿಂದ ನಾಡಿನ ಶ್ರೇಷ್ಠ ಕವಿಗಳ ಕುರಿತು ಪ್ರಚಾರವಾಗಬೇಕು ಹಾಗೂ ಸಾಹಿತ್ಯದ ಆಸಕ್ತಿ ಜನರಲ್ಲಿ ಮೂಡಿಸುವಂತಾಗಬೇಕು. ಈ ನಿಟ್ಟಿನಲ್ಲಿ ಒಂದು ವ್ಯವಸ್ಥಿತ ಕ್ರೀಯಾ ಯೋಜನೆ ರೂಪಿಸುವಂತೆ ಸಲಹೆ ನೀಡಿದರು.

ಮುಧುರಚನ್ನರು ಬರೆದಿರುವ ಸಾಹಿತ್ಯಕ್ಕೆ ಸಂಗೀತ ಜೋಡಣೆಯೊಂದಿಗೆ ಹಾಡುಗಳು ಹೊರಬರಬೇಕು. ಈಗಾಗಲೇ ಮುದ್ರಣಗೊಂಡಿರುವ ಹಾಡುಗಳು ಡಿ.ವಿ.ಡಿ ಮೂಲಕ ಸಾರ್ವಜನಿಕರಿಗೆ ತಲುಪಬೇಕು. ಇನ್ನು ಹೆಚ್ಚಿನ ಹಾಡುಗಳು ಮುದ್ರಣಗೊಂದು ಡಿ.ವಿ.ಡಿ ರೂಪದಲ್ಲಿ ಜನರಿಗೆ ಸಿಗುವಂತಾಗಬೇಕು ಎಂದರು.

ಕನ್ನಡ ಮತ್ತು ಸಂಸ್ಕಂತಿ ಇಲಾಖೆ ಸಹಾಯಕ ನಿರ್ದೇಶಕ ಮಹೇಶ ಪೋತದಾರ, ಅಕ್ಕಮಹಾದೇವಿ ಮಹಿಳಾ ವಿವಿ ಪ್ರಭಾರ ಕುಲಪತಿ ಡಾ. ಓಂಕಾರ ಕಾಕಡೆ, ಎಸ್.ಕೆ. ಕೊಪ್ಪ, ಎಂ.ಎಸ್.ಮಧಬಾವಿ, ಚೆನ್ನಪ್ಪ ಕಟ್ಟಿ, ಆರ್.ಸುನಂದಮ್ಮ, ಎ.ಎ.ಪಾರ್ಸಿ, ಡಿ.ಬಿ.ಭಜಂತ್ರಿ, ಆರ್‌.ಎನ್.ಸಿಂಪಿ, ಸೋಮಶೇಖರ ವಾಲಿ, ಜಗದೀಶ ಗಲಗಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.