ADVERTISEMENT

ವಿಜಯಪುರ ಜಿಲ್ಲೆಯ ವಿವಿಧೆಡೆ ಧಾರಾಕಾರ ಮಳೆ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2022, 15:23 IST
Last Updated 4 ಸೆಪ್ಟೆಂಬರ್ 2022, 15:23 IST
ವಿಜಯಪುರ ನಗರದಲ್ಲಿ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಮೀನಾಕ್ಷಿ ಚೌಕಿಯಲ್ಲಿ ನಿಂತಿದ್ದ ಭಾರೀ ಪ್ರಮಾಣದ ನೀರಿನಲ್ಲೇ ಆಟೋ ಸಂಚರಿಸಿತು –ಪ್ರಜಾವಾಣಿ ಚಿತ್ರ
ವಿಜಯಪುರ ನಗರದಲ್ಲಿ ಭಾನುವಾರ ಸಂಜೆ ಸುರಿದ ಧಾರಾಕಾರ ಮಳೆಯಿಂದ ಮೀನಾಕ್ಷಿ ಚೌಕಿಯಲ್ಲಿ ನಿಂತಿದ್ದ ಭಾರೀ ಪ್ರಮಾಣದ ನೀರಿನಲ್ಲೇ ಆಟೋ ಸಂಚರಿಸಿತು –ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಭಾನುವಾರ ಮುಂಜಾನೆ ಹಾಗೂ ಸಂಜೆ ಗುಡುಗು, ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ.

ಮಳೆಯ ಆರ್ಭಟದಿಂದ ರಸ್ತೆ ಮೇಲೆ ನೀರು ಹರಿಯಿತು. ಹೊಲಗಳಲ್ಲಿ ನೀರು ನಿಂತಿರುವ ದೃಶ್ಯ ಕಂಡುಬಂದಿತು. ಮಳೆಯ ಪರಿಣಾಮವಿಜಯಪುರ ನಗರದಲ್ಲಿ ಭಾನುವಾರ ಸಂಜೆ 5 ರಿಂದ 7.30ರ ವರೆಗೆ ವಿದ್ಯುತ್‌ ಸಂಪರ್ಕ ಸ್ಥಗಿತವಾಗಿತ್ತು. ಭಾನುವಾರದ ಸಂತೆಗೆ ಹಾಗೂ ಗಣಪತಿ ವೀಕ್ಷಣೆಗೂ ತೊಂದರೆಯಾಯಿತು. ಗಣಪತಿ ವಿಸರ್ಜನೆಗೂ ಅಡಚಣೆಯಾಯಿತು.

ಹೊಂಡ, ಗುಂಡಿಗಳಲ್ಲಿ ಮಳೆ ನೀರು ನಿಂತು ಸೊಳ್ಳೆಗಳ ಕಾಟವೂಅತಿಯಾಗಿದೆ. ಜೊತೆಗೆ ಮಳೆ, ಬಿಸಿಲಿನ ಆಟದಲ್ಲಿ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ. ಶೀತ, ಜ್ವರ, ಮೈಕೈನೋವಿನಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.