ADVERTISEMENT

ಗದಗ, ವಿಜಯಪುರ, ಬಾಗಲಕೋಟೆಯಲ್ಲಿ ಮಳೆ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 5:24 IST
Last Updated 24 ಫೆಬ್ರುವರಿ 2026, 5:24 IST
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದಲ್ಲಿ ಬಿರುಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿದೆ
ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ನಿವರಗಿ ಗ್ರಾಮದಲ್ಲಿ ಬಿರುಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿದೆ   

ಹುಬ್ಬಳ್ಳಿ: ವಿಜಯಪುರ, ಬಾಗಲಕೋಟೆ ಮತ್ತು ಗದಗ ಜಿಲ್ಲೆಯಲ್ಲಿ ಸೋಮವಾರ ಬಿರುಗಾಳಿ ಸಹಿತ ಮಳೆಯಾಯಿತು. ವರ್ಷದ ಮೊದಲ ಮಳೆಯು, ವಾತಾವರಣವನ್ನು ತಂಪಾಗಿಸಿತು.

ವಿಜಯಪುರ ನಗರ, ತಿಕೋಟಾ ಮತ್ತು ಚಡಚಣ ತಾಲ್ಲೂಕು ವ್ಯಾಪ್ತಿ ಹಾಗೂ ಹೊರ್ತಿ, ನಿವರಗಿ, ಇಂಚಗೇರಿಯಲ್ಲಿ ಗುಡುಗು, ಸಿಡಿಲು ಸಹಿತ ಮಳೆಯಾಯಿತು.

ಜಿಲ್ಲೆಯಾದ್ಯಂತ ದ್ರಾಕ್ಷಿ ಬೆಳೆ ಕಟಾವಿಗೆ ಬಂದಿದ್ದು, ಒಣ ದ್ರಾಕ್ಷಿ ತಯಾರಿಕೆಗೆ ಸಜ್ಜಾಗಿರುವ ಹೊತ್ತಿನಲ್ಲಿ ಮಳೆ ಆಗಿರುವುದು ತೊಂದರೆಯಾಗಿದೆ. ಚಡಚಣ ತಾಲ್ಲೂಕಿನ ನಿವರಗಿಯಲ್ಲಿ ಗಾಳಿಗೆ ದ್ರಾಕ್ಷಿ ಸಾಲು ನೆಲಕ್ಕುರುಳಿದೆ.

ADVERTISEMENT

ಬಾಗಲಕೋಟೆ ಜಿಲ್ಲೆಯ ಅಮೀನಗಡ, ನೀರಲಕೇರಿ ಸೇರಿ ವಿವಿಧೆಡೆ 10 ನಿಮಿಷಕ್ಕೂ ಹೆಚ್ಚು ಸಮಯ ತುಂತುರು ಮಳೆಯಾಯಿತು., ಅಮೀನಗಡ, ಕಮತಗಿ, ಮಹಾಲಿಂಗಪುರ, ರಬಕವಿ, ಹುನಗುಂದದಲ್ಲೂ ಮಳೆಯಾಯಿತು.

ಗದಗ ಜಿಲ್ಲೆಯಲ್ಲಿ ಮುಂಡರಗಿ ಮತ್ತು ರೋಣ ತಾಲ್ಲೂಕಿನ ಕೆಲವೆಡೆ ಮಳೆಯಾಯಿತು. ಬೆಳೆಗಳ ಒಕ್ಕಣೆ ಪ್ರಕ್ರಿಯೆ ಇನ್ನೂ ನಡೆದಿಲ್ಲ. ಕಡಲೆ, ಜೋಳ, ಕುಸುಬೆ, ಗೋಧಿ ಬೆಳೆಯನ್ನು ರಕ್ಷಿಸಿಕೊಳ್ಳಲು ಹರಸಾಹಸಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.