
ವಿಜಯಪುರ: ಖಡಕ್ ರೊಟ್ಟಿ, ಶೇಂಗಾ ಚಟ್ನಿ ತಿಂದ ಹಳ್ಳಿ ಚಿಣ್ಣರು ಮುಂದೆ, ಮ್ಯಾಗಿ, ಫಿಜ್ಜಾ, ನ್ಯೂಡಲ್ಸ್, ಬಟರ್, ಬಿಸ್ಕೇಟ್ ತಿನ್ನುವ ಪ್ಯಾಟೆ ಮಕ್ಕಳು ಹಿಂದೆ... ಬರಿಗಾಲಲ್ಲೇ ಓಡಿ ಖಾಸಗಿ ಶಾಲಾ ಮಕ್ಕಳನ್ನು ಹಿಂದಿಕ್ಕಿ ನಗದು ಬಹುಮಾನ ಗಿಟ್ಟಿಸಿ ಪ್ರಾಬಲ್ಯ ಮೆರೆದ ಸರ್ಕಾರಿ ಶಾಲಾ ಮಕ್ಕಳು... ಗಮನ ಸೆಳೆದ ವಾಕ್ ಮತ್ತು ಶ್ರವಣದೋಷವುಳ್ಳ ಚಿಣ್ಣರು... ಖುಷಿಗಾಗಿ ಹೆಜ್ಜೆ ಹಾಕಿದ ಪತ್ರಕರ್ತರು...
ಇದು, ನಗರದ ಡಾ. ಬಿ. ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಶುಕ್ರವಾರ ವೃಕ್ಷಥಾನ್ ಹೆರಿಟೇಜ್ ರನ್-2025 ಅಂಗವಾಗಿ ಆಯೋಜಿಸಲಾಗಿದ್ದ ವೃಕ್ಷ ಕಿಡ್ಸ್ ರನ್, ವಾಕ್ ಮತ್ತು ಶ್ರವಣದೋಷವುಳ್ಳ ಮಕ್ಕಳ ಓಟ ಹಾಗೂ ಮಾಧ್ಯಮ ಪ್ರತಿನಿಧಿಗಳ ಓಟದಲ್ಲಿ ಕಂಡುಬಂದ ದೃಶ್ಯ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ವೃಕ್ಷಥಾನ್ ಧ್ವಜ ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ಬೆಳಿಗ್ಗೆ ಏಳು ಗಂಟೆಯಿಂದಲೇ ಜಿಲ್ಲಾ ಕ್ರೀಡಾಂಗಣದಲ್ಲಿ ಸೇರಿದ ಎಲ್. ಕೆ. ಜಿ, ಯು.ಕೆ.ಜಿ, ಮತ್ತು ಒಂದರಿಂದ 5ನೇ ತರಗತಿ ವರೆಗಿನ ವಿವಿಧ ಶಾಲೆಗಳ ಮಕ್ಕಳು, ವಾಕ್ ಮತ್ತು ಶ್ರವಣ ದೋಷವುಳ್ಳ ಮಕ್ಕಳು ಅತ್ಯುತ್ಸಾಹದಿಂದ ಓಟದಲ್ಲಿ ಪಾಲ್ಗೊಂಡಿದ್ದರು. ಅಷ್ಟೇ ಅಲ್ಲ, ಓಡುತ್ತಿದ್ದ ಮಕ್ಕಳಿಗೆ ಚಪ್ಪಾಳೆ ತಟ್ಟಿ, ಘೋಷಣೆ ಹಾಕುವ ಮೂಲಕ ಹುರುದುಂಬಿಸಿದರು.
ವಿವಿಧ ವಿಭಾಗಗಳ ಫಲಿತಾಂಶ ಇಂತಿದೆ.
ವೃಕ್ಷ ಕಿಡ್ಸ್ ರನ್ 50 ಮೀ. ಓಟ (ನರ್ಸರಿ, ಎಲ್.ಕೆ.ಜಿ, ಯುಕೆಜಿ ಮತ್ತು ಒಂದನೇ ತರಗತಿ) ಬಾಲಕಿಯರ ವಿಭಾಗ: 1. ಶ್ರಾವ್ಯ ಸಿಂಗೆ, 2. ಭುವನೇಶ್ವರಿ ಅಂಗಡಿ, 3. ಪೂರ್ವಾ ಪಾಟೀಲ, ಹಿಬಾಫಾತಿಮಾ ಹೆಬ್ಬಾಳ ಮತ್ತು ಸುದೀಕ್ಷಾ ಗಂಗಾಧರ ಸಂಬಣ್ಣಿ (ಸಮಾಧಾನಕರ ಬಹುಮಾನ)
ಬಾಲಕರ ವಿಭಾಗ: 1. ಪ್ರೇಮಕುಮಾರ ಅಂಬಿ, 2. ಅಫ್ತಾಬ್ ಎ. ಜೈನಾಪುರ, 3. ಪ್ರೀತಂ ರಾಠೋಡ, 4. ವಿರಾಜ ಎ. ರಾಠೋಡ, ಜೈದೇವ ಹೇರಲಗಿ, ಮೊನೇಶ ಝಿಂಗಾಡೆ (ಸಮಾಧಾನಕರ)
200 ಮೀ. ಓಟ ಬಾಲಕಿಯರ ವಿಭಾಗ (2ನೇ ಮತ್ತು 3ನೇ ತರಗತಿ): 1. ಚಂದನಾ ಮಂಟೂರ, 2. ಸ್ಪೂರ್ತಿ ಜಂಬಗಿ, 3. ಆಯತ್ತ ರಾಠೋಡ, ದೀಪಾ ಆರ್. ಬೇತ, ಜೋಯಾ ಮುಲ್ಲಾ ಹಾಗೂ ಶ್ರೀವಿದ್ಯಾ ಜೋಶಿ (ಸಮಾಧಾನಕರ)
ಬಾಲಕರ ವಿಭಾಗ: 1. ಓಂಕಾರ ಮಣ್ಣೂರ, 2. ಸ್ಪರ್ಷ ಅಂಬಿಗೇರ, 3. ವಿಷ್ಣು ಪರೀಟ, 4. ಪ್ರಥ್ವಿರಾಜ ಬಳ್ಳಾರಿ, ಕೇಶವ ಸಾತಿಹಾಳ, ಶ್ರೀವಾತ್ಸವ ಜೋಶಿ (ಸಮಾಧಾನಕರ)
400 ಮೀ. ಓಟ (4ನೇ ಮತ್ತು 5ನೇ ತರಗತಿ ಮಕ್ಕಳಿಗೆ) ಬಾಲಕಿಯರ ವಿಭಾಗ: 1. ಅಫ್ರೀನ್ ನದಾಫ್, 2. ಲಕ್ಷ್ಮಿ ಹೊಸಮನಿ, 3. ಶೃದ್ದಾ ಪವಾರ, ಸೃಷ್ಠಿ ಕುಂದರಗಿ, ಜಿತಾಂಕ್ಷಾ ಶಹಾ (ಸಮಾಧಾನಕರ)
ಬಾಲಕರ ವಿಭಾಗ: 1. ಅಮೀತ ಚವ್ಹಾಣ, 2. ವಿವೇಕ ಬೈಚಬಾಳ, 3. ವಿಠ್ಠಲ ಹಾಲಳ್ಳಿ, 4. ಕೃಷ್ಣಕುಮಾರ ಹಜೇರಿ, ಫಾರೂಖ ದಳವಾರ (ಸಮಾಧಾನಕರ)
ವಾಕ್ ಮತ್ರು ಶ್ರವಣದೋಷವುಳ್ಳ ಮಕ್ಕಳಿಗಾಗಿ 400 ಮೀ. ಓಟ– ಬಾಲಕಿಯರ ವಿಭಾಗ: 1. ಅಕ್ಷತಾ ಗೊರಡ, 2. ಅನಸೂಯ ಚರಾಟೆ, 3. ಸಾವಿತ್ರಿ ಗರಸಂಗಿ, ತೇಜಸ್ವಿನಿ ಕುಂಟೋಜಿ ಮತ್ತು ಸೃಷ್ಠಿ ಹಯ್ಯಾಳ (ಸಮಾಧಾನಕರ)
ಬಾಲಕರ ವಿಭಾಗ: 1. ಆದಿತ್ಯ ಹರಿಜನ, 2. ಮುತ್ತು ಎಮ್ಮಿ, 3. ಹರೀಶ ಶೆತವಾಜ, ವಿನೋದ ರಾಠೋಡ ಮತ್ತು ಸ್ವಯಂ ಅಂಬಿ (ಸಮಾಧಾನಕರ)
ಮಾಧ್ಯಮ ಪ್ರತಿನಿಧಿಗಳಿಗಾಗಿ 800 ಮೀ. ಹ್ಯಾಪಿ ರನ್: 1. ಹಣಮಂತ ಕರಕೂರ, 2. ಸಿದ್ದಣ್ಣ ವಿಜಾಪುರ, 3. ಗುರು ಲೋಕುರಿ
ವೃಕ್ಷಥಾನ್ ಹೆರಿಟೆಜ್ ರನ್-2025 ಸಮಿತಿಯ ಮಹಾಂತೇಶ ಬಿರಾದಾರ, ಸಂಕೇತ ಬಗಲಿ, ಶಿವು ಕುಂಬಾರ, ರಮೇಶ ಬಿರಾದಾರ, ಅಮೀತ ಬಿರಾದಾರ, ಅಸ್ಪಾಕ ಮನಗೂಳಿ ಇದ್ದರು.
ಪ್ರಾಬಲ್ಯ ಮೆರೆದ ಸರ್ಕಾರಿ ಶಾಲಾ ಮಕ್ಕಳು ಬರಿಗಾಲಲ್ಲಿ ಓಡಿ ಗಮನ ಸೆಳೆದ ಹಳ್ಳಿ ಮಕ್ಕಳು ವಿಜೇತರಿಗೆ ಭರ್ಜರಿ ನಗದು ಬಹುಮಾನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.