ADVERTISEMENT

ಹೊರ್ತಿ | ‘ಜಾತ್ರೆ, ರಥೋತ್ಸವಗಳು ಭಾವೈಕ್ಯತೆಯ ಸಂಕೇತ’

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2025, 7:37 IST
Last Updated 13 ಆಗಸ್ಟ್ 2025, 7:37 IST
ಹೊರ್ತಿಯ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 3ನೇ ಸೋಮವಾರ 14ನೇ ವರ್ಷದ ಬೃಹತ್ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು
ಹೊರ್ತಿಯ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 3ನೇ ಸೋಮವಾರ 14ನೇ ವರ್ಷದ ಬೃಹತ್ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು   

ಹೊರ್ತಿ: ಜಾತ್ರೋತ್ಸವಗಳಲ್ಲಿ ಜರುಗುವ ಪಲ್ಲಕ್ಕಿ, ರಥೋತ್ಸವ ಮತ್ತು ನಂದಿಕೋಲ ಉತ್ಸವಗಳು ಮನುಷ್ಯರಲ್ಲಿ ಪ್ರೀತಿ, ವಿಶ್ವಾಸ ಶ್ರದ್ಧೆಯ ಮತ್ತು ಭಾವೈಕ್ಯತೆಯ ಭಾವನೆ ಮೂಡಿಸುತ್ತವೆ ಎಂದು ವಿಜಯಪೂರ ತಾಲ್ಲೂಕಿನ ಕನ್ನೂರ ಗುರುಮಠದ ಸೋಮನಾಥ ಶಿವಾಚಾರ್ಯರು ಶ್ರೀಗಳು ಹೇಳಿದರು.

ಹೊರ್ತಿಯ ಜಗದ್ಗುರು ರೇವಣಸಿದ್ದೇಶ್ವರ ಜಾತ್ರೆ, ಶ್ರಾವಣ ಮಾಸದ 3ನೇ ಸೋಮವಾರ ಹಾಗೂ 14ನೇ ವರ್ಷದ ರಥೋತ್ಸವಕ್ಕೆ ಸೋಮವಾರ ಚಾಲನೆ ನೀಡಿ ಮಾತನಾಡಿದರು.

ಸಾಮಾಜಿಕ ಜವಾಬ್ದಾರಿ ಮತ್ತು ವೈಯಕ್ತಿಕ ಬದುಕಿನ ಜವಾಬ್ದಾರಿಯನ್ನು ಮಕ್ಕಳಿಗೆ ತಿಳಿ ಹೇಳಬೇಕು ಧಾರ್ಮಿಕ ಕ್ಷೇತ್ರಗಳಲ್ಲಿ ಮಠ, ಮಂದಿರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ಮತ್ತು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗಿ ಸಂಸ್ಕೃತಿ, ಸಂಸ್ಕಾರದ ಮಹತ್ವವನ್ನು ಮಕ್ಕಳಿಗೆ ತಿಳಿ ಹೇಳಬೇಕಾಗಿದೆ' ಎಂದು ಹೇಳಿದರು

ADVERTISEMENT

ಕಾತ್ರಾಳದ ಅಮೃತಾನಂದ ಸ್ವಾಮೀಜಿ, ತಾಳಿಕೋಟೆಯ ಖಾಸ್ಗತೇಶ್ವರ ಮಠದ ಬಾಲಶಿವಯೋಗಿ ಸಿದ್ಧಲಿಂಗ ದೇವರು ಸಾನಿಧ್ಯ ವಹಿಸಿದ್ದರು. ದೇವಸ್ಥಾನದ ಅಧ್ಯಕ್ಷ ಅಣ್ಣಪ್ಪ ಖೈನೂರ ಅಧ್ಯಕ್ಷತೆ ವಹಿಸಿದ್ದರು.

ಗುರಪ್ಪ ಪೂಜಾರಿ, ಶ್ರಿಶೈಲ ಶಿವೂರ, ಬುದ್ದಪ್ಪ ಭೋಸಗಿ, ಬಸವರಾಜ ಸಾವುಕಾರ, ಅಣ್ಣಪ್ಪಗೌಡ ಪಾಟೀಲ, ರೇವಣಸಿದ್ಧ ಪುಜಾರಿ, ದಾನಪ್ಪ ದುರ್ಗದ, ಶಿವಯ್ಯ ಹಿರೇಮಠ, ಶ್ರೀಮಂತ ಇಂಡಿ, ಅನೀಲ ಡೊಳ್ಳಿ, ಎಸ್‌.ಎಸ್. ಪೂಜಾರಿ, ಗುಪ್ಪ ರೂಗಿ, ಸಂಗಪ್ಪ ಕಡಿಮನಿ, ಗುರನಗೌಡ ಪಾಟೀಲ, ಎಸ್ ಪಿ.ಪೂಜಾರಿ, ಎಸ್ ಎಸ್.ತೇಲಿ, ಎಸ್ ಎಸ್.ಬೋರ್ಗಿ, ಸಿದ್ದು ಜಂಬಗಿ, ಬಸವರಾಜ ಬೋಳೆಗಾಂವ, ಎಸ್‌. ಎಸ್‌. ಮಕಣಾಪೂರ ಸೇರಿದಂತೆ ಸುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

ಹೊರ್ತಿಯ ರೇವಣಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರಾವಣ ಮಾಸದ 3ನೇ ಸೋಮವಾರ 14ನೇ ವರ್ಷದ ಬೃಹತ್ ರಥೋತ್ಸವವು ಅಪಾರ ಭಕ್ತರ ಸಮ್ಮುಖದಲ್ಲಿ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.