ವಿಜಯಪುರ: ಬಿಜೆಪಿಯವರಿಗೆ ಮಾನ, ಮರ್ಯಾದೆ, ತಾಕತ್ತು, ದಮ್ಮು ಇದ್ದರೆ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ದರ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಲಿ ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೇಳಿದರು.
ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಮಂಗಳವಾರ ಭೇಟಿ ನೀಡಿದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿರುವ ಸಂದರ್ಭದಲ್ಲಿ ಬಿಜೆಪಿ ರಾಜ್ಯ ನಾಯಕರಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ರ‍್ಯಾಲಿ ಮಾಡುವುದರಲ್ಲಿ ಯಾವುದೇ ನೈತಿಕತೆ ಇಲ್ಲ ಎಂದರು.
‘ಶಕ್ತಿ’ ಯೋಜನೆಯಡಿ ಇದುವರೆಗೆ ರಾಜ್ಯದಲ್ಲಿ ಸುಮಾರು 429 ಕೋಟಿ ಜನ ಪ್ರಯಾಣ ಮಾಡಿದ್ದಾರೆ. ವಿರೋಧ ಪಕ್ಷಗಳ ಟೀಕೆಯ ನಡುವೆ ಶಕ್ತಿ ಯೋಜನೆ ಯಶಸ್ವಿಯಾಗಿದೆ ಎಂದು ಹೇಳಿದರು.
ಶೀಘ್ರದಲ್ಲೇ ಎರಡು ಸಾವಿರ ಹೊಸ ಬಸ್ ಖರೀದಿಸುತ್ತೇವೆ. ಸಿಬ್ಬಂದಿ ನೇಮಕಾತಿ ಕೂಡ ನಡೆಯಲಿದೆ. ರಾಜ್ಯದ ಎಲ್ಲ ನಗರಗಳಲ್ಲೂ ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಲು ಉದ್ದೇಶಿಸಲಾಗಿದೆ ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿ, ಸಚಿವರು, ಶಾಸಕರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ನೋವು ಪಕ್ಷದ ಕಾರ್ಯಕರ್ತರಿಗೆ ಇದೆ ಎಂದು ಹೇಳಿದರು.
ಸರ್ಕಾರದ ನಾಮನಿರ್ದೇಶನ ಸಂದರ್ಭದಲ್ಲಿ ಜಿಲ್ಲೆಗೆ ಆದ್ಯತೆ ನೀಡಬೇಕು ಎಂದರು.
ಪ್ರತಿ ದಿನ ಬೆಂಗಳೂರು–ವಿಜಯಪುರ ನಗರದ ನಡುವೆ ಸಂಚರಿಸುತ್ತಿರುವ ‘ಕಲ್ಯಾಣ ರಥ’ ಬಸ್ ಟಿಕೆಟ್ ದರ ಬಾರಿ ಕಡಿಮೆ ಮಾಡಲು ವಿನಂತಿಸಿದರು.
ಮಹಾಂತೇಶ ಬಿರಾದಾರ, ಸಂಗಮೆಶ ಬಬಲೇಶ್ವರ, ಮಹ್ಮದ ರಫೀಕ ಟಪಾಲ, ಮದನ ಎಂ. ಲೋಣಿ, ಚಾಂದಸಾಬ ಗಡಗಲಾವ, ವೈಜನಾಥ ಕರ್ಪೂರಮಠ, ಸುಭಾಷ ಛಾಯಾಗೋಳ, ಆಜಾದ ಪಟೇಲ, ಅಫ್ಜಲ ಜಾನವೇಕರ, ಸುಭಾಷ ಕಾಲೇಬಾಗ, ಗಂಗಾಧರ ಸಂಬಣ್ಣಿ, ಮಾದೇವಿ ಗೋಕಾಕ, ವಿದ್ಯಾರಾಣಿ ತುಂಗಳ, ರಾಜೇಶ್ವರಿ ಚೋಳಕೆ, ಜಮೀರ ಬಕ್ಷಿ, ಶಾಹಜಾನ ಮುಲ್ಲಾ, ಶ್ರೀಕೃಷ್ಣ ಕಾಮಟೆ, ಶಕೀಲ ಬಾಗಮಾರೆ, ಸುರೇಶ ಗೊಣಸಗಿ, ವಸಂತ ಹೊನಮೋಡೆ, ಸಾಹೇಬಗೌಡ ಬಿರಾದಾರ, ಸುಂದರಪಾಲ ರಾಠೋಡ, ಹಾಜಿಲಾಲ ದಳವಾಯಿ, ಚನ್ನಬಸಪ್ಪ ನಂದರಗಿ, ಲಕ್ಷೀ ಕ್ಷೀರಸಾಗರ, ಭಾರತಿ ಹಡಪದ, ಹಮೀದಾ ಪಟೇಲ, ರುಬಿನಾ ಹಳ್ಳಿ, ಮಂಜುಳಾ ಗಾಯಕವಾಡ, ದೀಪಾ ಕುಂಬಾರ, ಭಾರತಿ ನಾವಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.