ADVERTISEMENT

ಆಯುಷ್‌ ಕ್ಲಿನಿಕ್‌, ಔಷಧಾಲಯ ಉದ್ಘಾಟನೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 15:39 IST
Last Updated 17 ಆಗಸ್ಟ್ 2022, 15:39 IST
ವಿಜಯಪುರ ನಗರದ ರಾಮಮಂದಿರ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಆಯುಷ್‌ ಕ್ಲಿನಿಕ್‌ ಮತ್ತು ಆಯುಷ್‌ ಫಾರ್ಮಾವನ್ನು ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು. ಡಾ.ನಿತಿನ್‌ ಅಗರವಾಲ್‌ ಇದ್ದಾರೆ
ವಿಜಯಪುರ ನಗರದ ರಾಮಮಂದಿರ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಆಯುಷ್‌ ಕ್ಲಿನಿಕ್‌ ಮತ್ತು ಆಯುಷ್‌ ಫಾರ್ಮಾವನ್ನು ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು. ಡಾ.ನಿತಿನ್‌ ಅಗರವಾಲ್‌ ಇದ್ದಾರೆ   

ವಿಜಯಪುರ: ನಗರದ ರಾಮಮಂದಿರ ರಸ್ತೆಯಲ್ಲಿ ನೂತನವಾಗಿ ಆರಂಭವಾದ ಆಯುಷ್‌ ಕ್ಲಿನಿಕ್‌ ಮತ್ತು ಆಯುಷ್‌ಔಷಧಾಲಯವನ್ನು ಯರನಾಳ ವಿರಕ್ತಮಠದ ಸಂಗನಬಸವ ಸ್ವಾಮೀಜಿ ಬುಧವಾರ ಉದ್ಘಾಟಿಸಿದರು.

ಉತ್ತರ ಕರ್ನಾಟಕದ ಪ್ರತಿಷ್ಠಿತ ಆಯುಷ್‌ ಕ್ಲಿನಿಕ್‌ ಸಮಾಜ ಸೇವೆಗೆ ಅಣಿಯಾಗಿದೆ. ವೈದ್ಯಕೀಯ ಎಂದರೆ ಹೆದರುವ ಈ ಸಮಯದಲ್ಲಿ ಕಡಿಮೆ ದರದಲ್ಲಿ ವೈದ್ಯಕೀಯ ಸೇವೆಯನ್ನು ಜನಸಾಮಾನ್ಯರಿಗೆ ಲಭಿಸುವಂತಾಗಲಿ ಎಂದು ಶ್ರೀಗಳು ಹಾರೈಸಿದರು.

ಡಾ.ನಿತಿನ್‌ ಅಗರವಾಲ್‌ ಅವರವೈದ್ಯಕೀಯ ಜ್ಞಾನ ವಿಜಯಪುರ ಸೇರಿದಂತೆ ನೆರೆಯ ಜಿಲ್ಲೆಯ ಜನರಿಗೆ ಲಭಿಸಲಿ.ಆಸ್ಪತ್ರೆಯಿಂದ ಜನಸಾಮಾನ್ಯರಿಗೆ ಹೆಚ್ಚಿನ ಅನುಕೂಲವಾಗಲಿ ಎಂದು ಹೇಳಿದರು.

ADVERTISEMENT

ಆಸ್ಪತ್ರೆಯ ಮುಖ್ಯಸ್ಥರಾದ ಡಾ.ನಿತಿನ್‌ ಅಗರವಾಲ್‌ ಮಾತನಾಡಿ, ಆಯುಷ್‌ ಕ್ಲಿನಿಕ್‌ ಎಲ್ಲ ರೀತಿಯ ವೈದ್ಯಕೀಯ ಸೇವೆಗಳು ಜನರಿಗೆ ಲಭಿಸಲಿದೆ. ವೈದ್ಯಕೀಯ ಪ್ರಯೋಗಾಲಯ, ಔಷಧಾಲಯ ಎಲ್ಲವೂ ಲಭಿಸಿದೆ. ನಗರದ ಒಳಗಿನ ಜನರಿಗೆ ವೈದ್ಯಕೀಯ ಸೇವೆ ಲಭಿಸಲಿ ಎಂಬ ಉದ್ದೇಶದಿಂದ ಆರಂಭಿಸಲಾಗಿದೆ ಎಂದು ತಿಳಿಸಿದರು.

ಡಾ.ನಿತಿನ್‌ ಅಗರವಾಲ್‌ ದಂಪತಿ ಶ್ರೀಗಳನ್ನು ಸನ್ಮಾನಿಸಿದರು. ಬಸವನ ಬಾಗೇವಾಡಿ ಶಾಸಕ ಶಿವಾನಂದ ಪಾಟೀಲ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಡಾ.ಮನಿಷಾ ಅಗರವಾಲ್‌,ಬ್ರಿಜ್‌ ಮೋಹನ್‌ ಅಗರವಾಲ್‌, ನವೀನ್‌ ಅಗರವಾಲ್‌, ರಾಧಿಕಾ ಅಗರವಾಲ್‌, ಅನಿಲ್‌ ಅಗರವಾಲ್‌, ಲೋಕನಾಥ ಅಗರವಾಲ್‌, ಭಾರತಿ ಟಂಕಸಾಲಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.