ಇಂಡಿ: ಪಟ್ಟಣದ ಆರ್.ಎಂ. ಶಹಾ ಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ (ಸಿಬಿಎಸ್‌ಸಿ) ಉತ್ತಮ ಸಾಧನೆಗೈದಿದ್ದಾರೆ. ಪರೀಕ್ಷೆಗೆ ಹಾಜರಾದ 48 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಶೇ 100 ಫಲಿತಾಂಶ ದಾಖಲಿಸಿದ್ದಾರೆ.
ಅಭಿಜಿತ್ ಕುಮಾರ ಪಿ. ಶೇ 95.2 (ಪ್ರಥಮ) ಹಾಗೂ ಆಶಿಶ್ ಕೆ. ರಾಠೋಡ ಶೇ 90.5ರಷ್ಟು (ದ್ವಿತೀಯ) ಅಂಕಗಳನ್ನು ಪಡೆದಿದ್ದಾರೆ.
ಸಂಸ್ಥೆಯ ಧನ್ಯಕುಮಾರ ಆರ್. ಶಹಾ, ಕಾರ್ಯದರ್ಶಿ ಮಹೇಶ. ಡಿ. ಶಹಾ ಹಾಗೂ ಆಡಳಿತಾಧಿಕಾರಿ ಕಲ್ಪನಾ ಶಹಾ ಮಕ್ಕಳಿಗೆ ಹಾಗೂ ಶಾಲಾ ಸಿಬ್ಬಂದಿಗೆ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.