ADVERTISEMENT

ಇನ್‌ಸ್ಟಾಗ್ರಾಂ ಲವ್‌ಸ್ಟೋರಿ: ಗೃಹಿಣಿಯನ್ನು ಬಾವಿಗೆ ದೂಡಿದ ಯುವಪ್ರೇಮಿ

4 ದಿನ ಪಾಳುಬಾವಿಯಲ್ಲಿ ಕಳೆದ ಮಹಿಳೆಯ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2020, 20:23 IST
Last Updated 14 ಅಕ್ಟೋಬರ್ 2020, 20:23 IST
ಪಾಳುಬಾವಿಯಿಂದ ರಕ್ಷಿಸಿದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಅಗ್ನಿಶಾಮಕ ಸಿಬ್ಬಂದಿ
ಪಾಳುಬಾವಿಯಿಂದ ರಕ್ಷಿಸಿದ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸಿದ ಅಗ್ನಿಶಾಮಕ ಸಿಬ್ಬಂದಿ   

ವಿಜಯಪುರ: ಒಂದೂವರೆ ತಿಂಗಳ ಹಿಂದೆಯಷ್ಟೇ ಇನ್‌ಸ್ಟಾಗ್ರಾಂನಲ್ಲಿ ಪರಿಚಯವಾದ ಯುವಕನೊಬ್ಬ ತನ್ನನ್ನು ಕಾಣಲು ಬಂದ ವಿವಾಹಿತ ಮಹಿಳೆಯನ್ನು ನೂರು ಅಡಿ ಪಾಳುಬಾವಿಯಲ್ಲಿ ದೂಡಿ ಪರಾರಿಯಾದ ಘಟನೆ ದೇವನಹಳ್ಳಿ ಸಮೀಪ ನಡೆದಿದೆ.

ನಾಲ್ಕು ದಿನಗಳಿಂದಎ. ರಂಗನಾಥ ಪುರದ ಬಳಿಯ ಪಾಳುಬಾವಿಯಲ್ಲಿ ಬಿದ್ದಿದ್ದ ಮಹಿಳೆಯನ್ನು ಪೊಲೀಸರು ಬುಧವಾರ ಕ್ರೇನ್‌ ಮೂಲಕ ಮೇಲೆತ್ತಿ ರಕ್ಷಿಸಿದ್ದಾರೆ. ಆಕೆ ನೀಡಿದ ಮಾಹಿತಿ ಮೇರೆಗೆ ಪ್ರಿಯಕರನನ್ನು ಬಂಧಿಸಿದ್ದಾರೆ.

ಇನ್‌ಸ್ಟಾಗ್ರಾಂನಲ್ಲಿ ಅರಳಿದ ಪ್ರೀತಿ: ಒಂದೂವರೆ ತಿಂಗಳ ಹಿಂದೆ ರಂಗನಾಥಪುರ ಗ್ರಾಮದ ಆದರ್ಶ್ ಮತ್ತುಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಸೊಣ್ಣಹಳ್ಳಿಯ 22 ವರ್ಷದ ವಿವಾಹಿತ ಮಹಿಳೆ ಇನ್‌ಸ್ಟಾಗ್ರಾಂ ಮೂಲಕ ಪರಿಚಿತರಾಗಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.