ವಿಜಯಪುರ: ನೀರಾವರಿ ಯೋಜನೆಗಳಿಂದ ಜಮೀನುಗಳಿಗೆ ನೀರುಣಿಸಿದ್ದು ಮಾತ್ರವಲ್ಲ, ಐತಿಹಾಸಿಕ ಕೆರೆಗಳಿಗೂ ಮರುಜೀವ ನೀಡಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಹೇಳಿದರು.
ತಿಕೋಟಾ ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಎಪಿಎಂಸಿಯಿಂದ 2025-26ನೇ ವರ್ಷದ ವಾರ್ಷಿಕ ಕ್ರಿಯಾ ಯೋಜನೆ ಅಡಿಯಲ್ಲಿ ಮಂಜೂರಾದ ₹20.55 ಲಕ್ಷ ವೆಚ್ಚದ 150 ಎಂ.ಟಿ. ಸಾಮರ್ಥ್ಯದ ಗೋದಾಮು ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸಚಿವ ಎಂ. ಬಿ. ಪಾಟೀಲ ಅವರು ಆದಿಲ್ ಶಾಹಿ ಕಾಲದ ಬೇಗಂ ತಾಲಾಬ್, ಮಮದಾಪುರ, ಭೂತನಾಳ ಕೆರೆಗಳು ಸೇರಿದಂತೆ ನೂರಾರು ಕೆರೆಗಳಿಗೆ ನೀರು ಹರಿಸಿದ್ದಾರೆ. ಮಳೆಗಾಗಿ ದೇವರನ್ನು ಆಶ್ರಯಿಸುತ್ತಿರುವ ಜಿಲ್ಲೆಯಲ್ಲಿ ಕೋಟಿ ವೃಕ್ಷ ಅಭಿಯಾನ ಪ್ರಾರಂಭಿಸಿ ಒಂದು ಕೋಟಿ ಗಿಡ ನೆಟ್ಟು ಅರಣ್ಯ ಕ್ರಾಂತಿ ಮಾಡಿದ್ದಾರೆ ಎಂದರು.
ಸಮುದಾಯ ಭವನ, ದೇವಸ್ಥಾನಗಳ ಅಭಿವೃದ್ಧಿ, ಜಲಕ್ರಾಂತಿ, ಅರಣ್ಯ ಕ್ರಾಂತಿಯ ಬಳಿಕ ಈಗ ಶಿಕ್ಷಣ ಕ್ರಾಂತಿ ಮಾಡುತ್ತಿದ್ದಾರೆ. ಕೈಗಾರಿಕೆ ಸಚಿವರಾಗಿ ಯುವಕರಿಗೆ ಉದ್ಯೋಗ ಒದಗಿಸಲು ಕೈಗಾರಿಕೆ ಕ್ರಾಂತಿಯನ್ನೂ ಮಾಡುತ್ತಿದ್ದಾರೆ ಎಂದು ಹೇಳಿದರು.
ರಾಂಪೂರ ಶ್ರೀ ಘಟಿವಾಳೇಶ್ವರ ಚಂದ್ರಗಿರಿಮಠದ ವಿದ್ಯಾನಂದಯ್ಯ ಹಿರೇಮಠ ಸ್ವಾಮೀಜಿ, ನಿಜಗುಣಾನಂದಯ್ಯ ಹಿರೇಮಠ ಸ್ವಾಮೀಜಿ, ಎಪಿಎಂಸಿ ಕಾರ್ಯದರ್ಶಿ ಅಲ್ಲಾಬಕ್ಷ ಬಿಜಾಪುರ, ಎಇಇ ಎಲ್. ಬಿ. ಲಮಾಣಿ, ಪಟ್ಟಣ ಪಂಚಾಯಿತಿ ಅಧಿಕಾರಿ ರಾಘವೇಂದ್ರ ನಡುವಿನಮನಿ, ಮುಖಂಡರಾದ ಸಾಹೇಬಗೌಡ ಕೆಂಪವಾಡ, ಐ. ಬಿ. ಉಳ್ಳಾಗಡ್ಡಿ, ರಾಜು ಬಿಳೂರ, ಮಲ್ಲಪ್ಪ ಹೊನವಾಡ, ಜಗದೀಶಗೌಡ ಪಾಟೀಲ, ಬಸಯ್ಯ ವಿಭೂತಿಮಠ, ಲೇಪು ಕೊಣ್ಣೂರ, ಭೀಮು ನಾಟೀಕಾರ, ಆರ್ ಬಿ ದೇಸಾಯಿ, ಹಾಜಿಬಾಯಿ ಕೋಟ್ಟಲಗಿ, ಯಮನಪ್ಪ ಮಲಕನವರ, ಸಿದ್ದಾರ್ಥ ಪರನಾಕರ, ಬುಳ್ಲಪ್ಪ ಪೂಜಾರಿ ಇದ್ದರು.
ಹೈಮಾಸ್ಕ್ ದೀಪಗಳಿಗೆ ಚಾಲನೆ
ತಿಕೋಟಾದಲ್ಲಿ ಪಟ್ಟಣ ಪಂಚಾಯಿತಿಯಿಂದ ನಗರೋತ್ಥಾನ ಹಂತ 4ರ ಅನುದಾನ ₹18 ಲಕ್ಷ ವೆಚ್ಚದಲ್ಲಿ ಬಾಬು ಜಗಜೀವನರಾಂ ಸರ್ಕಲ್ ಹತ್ತಿರ ಮಹಾದೇವ ಕುರಿ ಅವರ ಮನೆಯ ಹತ್ತಿರ ದುರ್ಗಾದೇವಿ ಹತ್ತಿರ ರುದ್ರಭೂಮಿಯಲ್ಲಿ ಹಾಗೂ ಬುದ್ಧ ಸರ್ಕಲ್ ಹತ್ತಿರ ಅಳವಡಿಸಲಾಗಿರುವ ಹೈಮಾಸ್ಕ್ ದೀಪಗಳನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಉದ್ಘಾಟಿಸಿದರು.
₹100 ಕೋಟಿ ಸಿ.ಎಸ್.ಆರ್ ಅನುದಾನದಲ್ಲಿ ಬಬಲೇಶ್ವರ ಮತಕ್ಷೇತ್ರದಲ್ಲಿ ಸರ್ಕಾರಿ ಶಾಲೆಗಳಲ್ಲಿ ಅಭಿವೃದ್ಧಿ ಕೆಲಸ ನಡೆಯುತ್ತಿದೆ- ಸುನೀಲಗೌಡ ಪಾಟೀಲ, ವಿಧಾನ ಪರಿಷತ್ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.