ದೇವರಹಿಪ್ಪರಗಿ: ವಿಜಯಪುರದಲ್ಲಿ ನಡೆಯಲಿರುವ ಜನಾಕ್ರೋಶ ಯಾತ್ರೆಯಲ್ಲಿ ಮತಕ್ಷೇತ್ರದ ಮೂರು ಸಾವಿರ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಮಾಜಿ ಶಾಸಕ ಸೋಮನಗೌಡ ಪಾಟೀಲ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ರಾಜ್ಯ ಕಾಂಗ್ರೆಸ್ ಸರ್ಕಾರದ ಜನವಿರೋಧಿ ನೀತಿಗಳಿಂದ ಜನಸಾಮಾನ್ಯರು ಬೇಸತ್ತು ಬಳಲುವಂತಾಗಿದೆ. ಜಾತಿಗಣತಿ ನೆಪದಲ್ಲಿ ಜಾತಿ ರಾಜಕೀಯ ಆರಂಭಗೊಂಡಿದೆ’ ಎಂದರು.
ಬಿಜೆಪಿ ಮುಖಂಡ ವಿಜಯಕುಮಾರ ಕೂಡಗಿನವರ ಮಾತನಾಡಿ, ‘ಏ.17ರಂದು ವಿಜಯಪುರದ ದರ್ಬಾರ್ ಶಾಲಾ ಮೈದಾನದಲ್ಲಿ ಸಭೆ ಜರುಗಲಿದೆ’ ಎಂದರು.
ಪ್ರಮುಖರಾದ ಉಮೇಶ ಕೋಳಕೂರ, ಪ್ರಭುಗೌಡ ಬಿರಾದಾರ, ರಮೇಶ ಮಸಬಿನಾಳ, ಸಿದ್ದು ಬುಳ್ಳಾ, ಅವ್ವಣ್ಣ ಗ್ವಾತಗಿ, ಪ್ರಕಾಶ ದೊಡಮನಿ, ಸಿದ್ರಾಮಯ್ಯ ಮಠ, ಹುಸೇನ್ ಗೌಂಡಿ, ಸೋಮಶೇಖರ ಹಿರೇಮಠ, ರಾವುತ ಅಗಸರ, ಮಹಾಂತೇಶ ಬಿರಾದಾರ, ರಮೇಶ ಈಳಗೇರ, ಭೀಮನಗೌಡ ಲಚ್ಯಾಣ, ದಾವೂಲ್ ಇನಾಮದಾರ, ಸೋಮು ದೇವೂರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.