
ಚಡಚಣ: ತಾಲ್ಲೂಕಿನ ಹಲಸಂಗಿಯಲ್ಲಿ ಸೋಮವಾರ ದುಷ್ಕರ್ಮಿಗಳು ಪಿಸ್ತೂಲ್‌ನಿಂದ ಗುಂಡು ಹಾರಿಸಿ, ಚಿನ್ನಾಭರಣದ ಅಂಗಡಿ ದರೋಡೆ ಮಾಡಿದ್ದಾರೆ. ಆತ್ಮಲಿಂಗ ಹೂಗಾರ (18) ಎಂಬ ವಿದ್ಯಾರ್ಥಿಗೆ ಗುಂಡು ತಗುಲಿ ಗಾಯವಾಗಿದೆ.
‘ಹಲಸಂಗಿ ಮುಖ್ಯರಸ್ತೆಯಲ್ಲಿರುವ ಮಹಾರುದ್ರ ಕಂಚಾಗಾರ ಅವರ ‘ಭೂಮಿಕಾ’ ಜ್ಯುವೆಲ್ಲರಿ ಶಾಪ್‌ಗೆ ಇಬ್ಬರು ಮುಸುಕುಧಾರಿ ವ್ಯಕ್ತಿಗಳು ಬೈಕ್ ಮೇಲೆ ಬಂದು, 205 ಗ್ರಾಂ ಚಿನ್ನಾಭರಣ ಮತ್ತು 1 ಕೆಜಿ ಬೆಳ್ಳಿ ದೋಚಿದ್ದಾರೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸುದ್ದಿಗಾರರಿಗೆ ತಿಳಿಸಿದರು.
‘ಕೃತ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಅನಿಲ್ ಬಸಣ್ಣ ಗಲಗಲಿ ಮೇಲೆ ದುಷ್ಕರ್ಮಿ ಗುಂಡು ಹಾರಿಸಿದ. ಅದು ಅಂಗಡಿ ಎದುರು ನಿಂತಿದ್ದ ಆತ್ಮಲಿಂಗ ಹೂಗಾರ ಎಂಬುವರ ಬಲಗಾಲಿಗೆ ತಗುಲಿದೆ’ ಎಂದರು. ಕೃತ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿದಾಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.