ADVERTISEMENT

ಹಸಿರು ಇಂಧನ ಉತ್ಪಾದನೆಗೆ ಕೈಜೋಡಿಸಿ: ಸಚಿವ ಎಂ.ಬಿ. ಪಾಟೀಲ ಕರೆ

ಬೃಹತ್‌ ಕೈಗಾರಿಕೆ ಸಚಿವ ಎಂ.ಬಿ. ಪಾಟೀಲ ಕರೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2024, 13:39 IST
Last Updated 14 ಆಗಸ್ಟ್ 2024, 13:39 IST
ವಿಜಯಪುರ ನಗರದಲ್ಲಿ ಹೆಸ್ಕಾಂನ ನಗರ ಉಪವಿಭಾಗ–1, ಶಿವಗಿರಿ ಶಾಖಾಧಿಕಾರಿಗಳ ಕಟ್ಟಡ ಹಾಗೂ ಭೂತನಾಳ ಶಾಖಾ ಕಚೇರಿಗಳನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು
ವಿಜಯಪುರ ನಗರದಲ್ಲಿ ಹೆಸ್ಕಾಂನ ನಗರ ಉಪವಿಭಾಗ–1, ಶಿವಗಿರಿ ಶಾಖಾಧಿಕಾರಿಗಳ ಕಟ್ಟಡ ಹಾಗೂ ಭೂತನಾಳ ಶಾಖಾ ಕಚೇರಿಗಳನ್ನು ಸಚಿವ ಎಂ.ಬಿ. ಪಾಟೀಲ ಉದ್ಘಾಟಿಸಿದರು   

ವಿಜಯಪುರ: ‘ಪರಿಸರ ಸಂರಕ್ಷಣೆಗಾಗಿ ಹಸಿರು ಇಂಧನ ಮತ್ತು ಉತ್ತಮ ಆರೋಗ್ಯಕ್ಕಾಗಿ ಸಾವಯವ ಆಹಾರ ಉತ್ಪಾದನೆಗೆ ಪ್ರೋತ್ಸಾಹ ನೀಡಲು ಎಲ್ಲರೂ ಕೈಜೋಡಿಸಬೇಕು’ ಎಂದು ಬೃಹತ್‌ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಹೇಳಿದರು.

ನಗರದ ಹೆಸ್ಕಾಂನ ನಗರ ಉಪವಿಭಾಗ–1, ಶಿವಗಿರಿ ಶಾಖಾಧಿಕಾರಿಗಳ ಕಟ್ಟಡ ಹಾಗೂ ಭೂತನಾಳ ಶಾಖಾಧಿಕಾರಿಗಳ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು.

‘ಅಭಿವೃದ್ಧಿ ಯೋಜನೆಗಳಿಗೆ ವಿದ್ಯುಚ್ಛಕ್ತಿ ಅಗತ್ಯ. ಆದರೆ, ಇದೇ ವಿದ್ಯುಚ್ಛಕ್ತಿ ಉತ್ಪಾದನೆಯು ಪರಿಸರಕ್ಕೂ ಹಾನಿಯಾಗಿದೆ. ಅಭಿವೃದ್ಧಿಗೆ ಅಗತ್ಯವಾಗಿರುವ ವಿದ್ಯುತ್ ಉತ್ಪಾದನೆಗೆ ಜಲ, ಪವನ ಮತ್ತು ಸೋಲಾರ್‌ನಂಥಹ ಹಸಿರು ಉತ್ಪಾದನಾ ಮಾರ್ಗದ ಅವಲಂಬನೆಗೆ ಒತ್ತು ನೀಡಲಾಗುತ್ತಿದೆ’ ಎಂದರು.

ADVERTISEMENT

‘ವಿಜಯಪುರ ಜಿಲ್ಲೆಯಲ್ಲಿ ವಿದ್ಯುತ್ ಸುಧಾರಣೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು 42 ವಿದ್ಯುತ್ ಸ್ಟೇಷನ್ ಮಾಡಿದ್ದೇವೆ. ಹಡಗಲಿ ಬಳಿ 400 ಕೆ.ವಿ ಕೇಂದ್ರ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗಿದೆ. ಜಲಸಂಪನ್ಮೂಲ ಸಚಿವನಾಗಿದ್ದ ಅವಧಿಯಲ್ಲಿ ಜಿಲ್ಲೆಯ ನೀರಾವರಿಗಾಗಿ 10 ಮುಖ್ಯಸ್ಥಾವರ ಮಾಡಿ 1,000 ಕಿ.ಮೀ. ಕಾಲುವೆ, ತಿಡಗುಂದಿಯಲ್ಲಿ ಏಷಿಯಾದ ಅತಿ ದೊಡ್ಡದಾದ ವಯಾಡಕ್ಟ್ ನಿರ್ಮಿಸಿದ್ದೇವೆ. ಶೀಘ್ರದಲ್ಲಿ ಬಾಕಿ ಇರುವ 16 ಕೆರೆಗಳನ್ನು ಭರ್ತಿ ಮಾಡಲಾಗುವುದು. ಹೊರ್ತಿ, ಗುಂದವಾನ, ಇಂಚಗೇರಿ ಕೆರೆಗಳಿಗೂ ನೀರು ಹರಿಸಲಾಗುವುದು’ ಎಂದರು.

ಶಾಸಕ ವಿಠ್ಠಲ ಕಟಕದೊಂಡ, ಹೆಸ್ಕಾಂ ಅಧೀಕ್ಷಕ ಎಂಜಿನಿಯರ್‌ ಸಿದ್ದಪ್ಪ ಬಿಂಜಲಗೇರಿ, ಉಪಮೇಯರ್ ದಿನೇಶ ಹಳ್ಳಿ, ರಾಜು ಮಗಿಮಠ, ಅಪ್ಪು ಪೂಜಾರಿ, ರಾಜು ಚವ್ಹಾಣ, ಶಫೀಕ ಮನಗೂಳಿ, ರವೀಂದ್ರ ಬಿಜ್ಜರಗಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.