ADVERTISEMENT

ವಿಜಯಪುರ| ಕವನ ರಚಿಸುವ ಕಾರ್ಯ ಕ್ಲಿಷ್ಟಕರ: ಸಾಹಿತಿ ಭಾರತಿ ಪಾಟೀಲ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2025, 6:16 IST
Last Updated 9 ನವೆಂಬರ್ 2025, 6:16 IST
ವಿಜಯಪುರ ನಗರದ ಗಾಂಧಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಕವಿಗಳನ್ನು ಸನ್ಮಾನಿಸಲಾಯಿತು
ವಿಜಯಪುರ ನಗರದ ಗಾಂಧಿ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದಿಂದ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಲಾಗಿದ್ದ ಕವಿಗೋಷ್ಠಿಯಲ್ಲಿ ಕವನ ವಾಚಿಸಿದ ಕವಿಗಳನ್ನು ಸನ್ಮಾನಿಸಲಾಯಿತು   

ವಿಜಯಪುರ: ಕವನ ರಚಿಸುವ ಕಾರ್ಯ ತುಂಬ ಕ್ಲಿಷ್ಟಕರವಾದದ್ದು, ಕವನ ರಚಿಸಲು ಆಶಕ್ತಿ ಹಾಗೂ ಪ್ರತಿಭೆ ಇರಬೇಕು ಎಂದು ಹಿರಿಯ ಸಾಹಿತಿ ಭಾರತಿ ಪಾಟೀಲ ಹೇಳಿದರು.

ನಗರದ ಗಾಂಧಿ ಭವನದಲ್ಲಿ ರಾಜ್ಯೋತ್ಸವ ನಿಮಿತ್ತ ಶುಕ್ರವಾರ ಆಯೋಜಿಸಿದ್ದ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಕವಿಗಳಿಗೆ ಕನ್ನಡ ಸಾಹಿತ್ಯ ಪರಿಷತ್ತು ಅವಕಾಶ ನೀಡಿದ್ದು ಶ್ಲಾಘನೀಯ ಕಾರ್ಯ ಎಂದರು.

ADVERTISEMENT

ಕಸಾಪ ಗೌರವ ಕೋಶಾಧ್ಯಕ್ಷ ಅಭಿಷೇಕ ಚಕ್ರವರ್ತಿ ಮಾತನಾಡಿ, ಕನ್ನಡ ನಾಡು-ನುಡಿ, ನೆಲ-ಜಲ ಕಾಪಾಡುವ ಹಾಗು ಕನ್ನಡ ನಾಡಿಗಾಗಿ ದುಡಿದವರನ್ನು ಸ್ಮರಿಸುವ ಗುಣಮಟ್ಟದ ಕವನ ರಚಿಸಿ, ವಾಚಿಸಿರುವುದು ಗಮನ ಸೆಳೆದವು ಎಂದರು.

ಕವಿ ಗೋಷ್ಠಿಯಲ್ಲಿ ಶೋಭಾ ಮೇಡೆಗಾರ, ಕವಿತಾ ಕಲ್ಯಾಣಪ್ಪಗೋಳ, ಅಂಬಿಕಾ ಕರಕಪ್ಪಗೋಳ. ಶಿವಾಜಿ ಮೋರೆ, ಸಾವಿತ್ರಿ ತಳವಾರ, ವೈಶಾಲಿ ಬಿಳೂರ, ಸಂಗಮೇಶ ಸಂಗನಗೌಡ ಹಚಡದ,  ಶಾಂತಾ ಪಾಟೀಲ, ಶಿವಲೀಲಾ ಕೋರಿ, ಅಂಬಣ್ಣ ಬಡಚಿ, ನಿಂಗಪ್ಪ ಬೊಮ್ಮನಹಳ್ಳಿ, ಶೈಲಾ ಗೊಂಗಡಿ, ರಜಿಯಾ ದಳವಾಯಿ, ಶಾಂತಾ ಬಿರಾದಾರ, ಶೋಭಾ ಹರಿಜನ, ಶರಣು ಚೆಟ್ಟಿ, ದಾನಮ್ಮ ಹೂಗಾರ, ಚಾಂದಬಿ ಬಿಜಾಪುರ, ಸಿದ್ದಪ್ಪ ಕಟೆ ಭಾಗವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಹಾಸಿಂಪೀರ ವಾಲಿಕಾರ, ಜಗದೀಶ ಬೋಳಸೂರ  ಅಲ್ಲಮಪ್ರಭು ಮಲ್ಲಿಕಾರ್ಜುನಮಠ, ಮಹಮ್ಮದಗೌಸ್‌ ಹವಾಲ್ದಾರ, ಡಾ ಸುರೇಖಾ ರಾಠೋಡ, ರಾಜೇಶ್ವರಿ ಮೋಪಗಾರ, ಶಿಲ್ಪಾ ಭಸ್ಮೆ, ಮಹೇಶ ಕ್ಯಾತನ, ಮಾಧವ ಗುಡಿ, ಡಾ ಆನಂದ ಕುಲಕರ್ಣಿ, ಲತಾ ಗುಂಡಿ, ಮಮತಾ ಮುಳಸಾವಳಗಿ, ಶೋಭಾ ಬಡಿಗೇರ, ಯಮನಪ್ಪ ಪವಾರ, ಪರವೀನಬಾನು ಶೇಖ, ರೂಪಾ ರಜಪೂತ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.