ADVERTISEMENT

ಎಸ್ಎಸ್ಎಲ್‌ಸಿ: ಎಕ್ಸಲಂಟ್‌ ವಿದ್ಯಾರ್ಥಿಗಳ ಸಾಧನೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 14:19 IST
Last Updated 2 ಮೇ 2025, 14:19 IST
ಪ್ರಜ್ವಲ ಪತ್ತಾರ
ಶೇ 99.84
ಪ್ರಜ್ವಲ ಪತ್ತಾರ ಶೇ 99.84   

ವಿಜಯಪುರ: 2024-25ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಎಕ್ಸಲಂಟ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಶಾಲೆಯ ವಿದ್ಯಾರ್ಥಿ ಪ್ರಜ್ವಲ ಪತ್ತಾರ ಶೇ 99.84 ಅಂಕ ಗಳಿಸುವ ಮೂಲಕ ರಾಜ್ಯಕ್ಕೆ ದ್ವಿತೀಯ ಹಾಗೂ ಕನ್ನಡ ಮಾಧ್ಯಮದಲ್ಲಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.

ಶಾಲೆಯ ಒಟ್ಟು 15 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿ, 26 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

ADVERTISEMENT

ಕನ್ನಡ ವಿಷಯದಲ್ಲಿ 1, ಇಂಗ್ಲಿಷ್‌ 2, ಹಿಂದಿ 4, ಗಣಿತದಲ್ಲಿ 2 ಮತ್ತು ಸಮಾಜವಿಜ್ಞಾನದಲ್ಲಿ 1 ವಿದ್ಯಾರ್ಥಿಗಳು 100/100 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಸಂಸ್ಥಾಪಕ ಚೇರಮನ್‍ ಬಸವರಾಜ ಕೌಲಗಿ, ರಾಜಶೇಖರ ಕೌಲಗಿ, ಸಂಸ್ಥೆಯ ಪದಾಧಿಕಾರಿಗಳು, ಮುಖ್ಯಶಿಕ್ಷಕರು ಮತ್ತು ಸಿಬ್ಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

ಶ್ರವಣ ಹುಣಚಗಿ ಶೇ 96
ಅನುಪಮ ಮಂಕಣಿ ಶೇ 94.56
ಪ್ರಕಾಶ ಭಾವಿಕಟ್ಟಿ ಶೇ 94.56
ಸ್ವಾತಿ ಹೊನಮೋರೆ ಶೇ 93.28
ಸೃಷ್ಟಿ ಕೆಮಶೆಟ್ಟಿ ಶೇ 91.84

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.