ADVERTISEMENT

ವಿಜಯಪುರ: ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರಾಗಿ ಕಾಶೀರಾಯಗೌಡ ನೇಮಕ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 15:40 IST
Last Updated 8 ಏಪ್ರಿಲ್ 2025, 15:40 IST
ಕಾಶೀರಾಯಗೌಡ ಬಿರಾದಾರ
ಕಾಶೀರಾಯಗೌಡ ಬಿರಾದಾರ   

ತಾಳಿಕೋಟೆ: ತಾಲ್ಲೂಕಿನ ಪೀರಾಪುರ ಗ್ರಾಮದ ಕಾಶೀರಾಯಗೌಡ ಗುರನಗೌಡ ಬಿರಾದಾರ ಇವರನ್ನು ಜಿಲ್ಲಾ ದಿಶಾ ಸಮಿತಿಗೆ ನಾಮ ನಿರ್ದೇಶಿತ ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.

ವಿಜಯಪುರ ನಗರದ ಲೋಕಸಭಾ ಸಂಸದರ ಕಾರ್ಯಾಲಯದಲ್ಲಿ ನಡೆದ ಸಭೆಯಲ್ಲಿ ಇವರ ನೇಮಕದ ಆದೇಶವನ್ನು ಮಂಗಳವಾರ ಪ್ರಕಟಿಸಲಾಯಿತು.

ಈ ಸಮಯದಲ್ಲಿ ಮುಖಂಡರಾದ ವೈ.ವೈ.ಹಿಪ್ಪರಗಿ, ಸಿದ್ದನಗೌಡ ಬಿರಾದಾರ (ಕಾರಗನೂರ), ಸುರೇಶ ಕುಮಾರ ಇಂಗಳಗೇರಿ (ಪೀರಾಪೂರ), ಮಡಿವಾಳಪ್ಪಗೌಡ ಬಿರಾದಾರ, ಶಿವನಗೌಡ ಪಾಟೀಲ (ಗೊಟಖಂಡಕಿ), ಬಸನಗೌಡ ಚಿಂಚೋಳಿ, ಅಯ್ಯಪ್ಪ ದೊಡ್ಡಮನಿ, ಸುಭಾಸ ನಡುವಿನಮನಿ (ಗುಂಡುಕನಾಳ) ಮತ್ತಿತರರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.