ADVERTISEMENT

ಕೊಲ್ಹಾರ | ಯುವ ಜನತೆ ಉತ್ತಮ ಮಾರ್ಗದಲ್ಲಿ ನಡೆಸಿ: ಕೊಪ್ಪದ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2025, 6:23 IST
Last Updated 2 ಆಗಸ್ಟ್ 2025, 6:23 IST
ಕೊಲ್ಹಾರ ತಾಲ್ಲೂಕು ಆಡಳಿತದಿಂದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಕಲ್ಲಿನಾಥ ದೇವರು ಮಾತನಾಡಿದರು
ಕೊಲ್ಹಾರ ತಾಲ್ಲೂಕು ಆಡಳಿತದಿಂದ ಪಾಲಿಟೆಕ್ನಿಕ್ ಸಭಾಂಗಣದಲ್ಲಿ ನಡೆದ ವ್ಯಸನ ಮುಕ್ತ ದಿನಾಚರಣೆಯಲ್ಲಿ ಕಲ್ಲಿನಾಥ ದೇವರು ಮಾತನಾಡಿದರು   

ಕೊಲ್ಹಾರ: ತಾಲ್ಲೂಕು ಆಡಳಿತದಿಂದ ಮಹಾಂತ ಶಿವಯೋಗಿಗಳ ಜನ್ಮದಿನವನ್ನು ವ್ಯಸನ ಮುಕ್ತ ದಿನವನ್ನಾಗಿ ಪಟ್ಟಣದ ಪಾಲಿಟೆಕ್ನಿಕ್‌ನ ಸಭಾಂಗಣದಲ್ಲಿ ಶುಕ್ರವಾರ ಆಚರಿಸಲಾಯಿತು.

ಸಾನ್ನಿಧ್ಯ ವಹಿಸಿದ್ದ ದಿಗಂಬರೇಶ್ವರ ಮಠದ ಕಲ್ಲಿನಾಥ ದೇವರು, ‘ಬಸವಣ್ಣನವರ ನುಡಿಗಳನ್ನು ಜೀವನದಲ್ಲಿ ಅಳವಡಿಸಿಕೊಂಡ ಶ್ರೀಗಳು ಉತ್ತಮ ಸಮಾಜ ನಿರ್ಮಾಣಕ್ಕೆ ಜೀವನವನ್ನು ಮೀಸಲಾಗಿಟ್ಟಿದ್ದರು’ ಎಂದು ಹೇಳಿದರು.

ಅರವಿಂದ್ ಕೊಪ್ಪದ ಉಪನ್ಯಾಸಕ ನೀಡಿ, ‘ಯುವ ಜನತೆಯನ್ನು ಉತ್ತಮ ಮಾರ್ಗಕ್ಕೆ ತರಲು ಶಿಕ್ಷಕರು, ಪೋಷಕರು, ಸಮಾಜದ ಹಿರಿಯರು ಪ್ರಯತ್ನ ಮಾಡಬೇಕಾದ ಅನಿವಾರ್ಯ ಇದೆ’ ಎಂದು ತಿಳಿಸಿದರು.

ADVERTISEMENT

ತಹಶೀಲ್ದಾರ್ ಎಸ್.ಎಸ್. ನಾಯಕಲಮಠ, ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ, ಮುಖ್ಯಾಧಿಕಾರಿ ವೀರೇಶ ಹಟ್ಟಿ, ಪ್ರಾಚಾರ್ಯ ಎಂ.ಎಸ್. ಗರಸಂಗಿ, ವೈದ್ಯಾಧಿಕಾರಿ ಲಕ್ಷ್ಮೀ ತಲ್ಲೂರು, ಸಮಾಜ ಕಲ್ಯಾಣ ಅಧಿಕಾರಿ ಮನು ಪತ್ತಾರ, ರವಿ ಗೊಳಸಂಗಿ, ಮಹೇಶ್ ತುಂಬರಮಟ್ಟಿ, ಶ್ರೀಕಾಂತ ಗಣಿ, ಪ್ರದೀಪಗೌಡ ಪಾಟೀಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.