ಕೊಲ್ಹಾರ: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಹಾಗೂ ಯುನೈಟೆಡ್ ಎಫರ್ಟ್ಸ್ ಸಂಸ್ಥೆ ಹಾಗೂ ಲೆಂಡ್ ಎ ಹ್ಯಾಂಡ್ ಇಂಡಿಯಾ ಸಂಸ್ಥೆ ವತಿಯಿಂದ ಎರಡು ದಿನಗಳ ವೃತ್ತಿಯೋಜನೆ ಕಾರ್ಯಕ್ರಮ ಗುರುವಾರ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ ನಡೆಯಿತು.
ವಿಜಯಪುರ ಜಿಲ್ಲೆಯ ಜಂಟಿ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸಮನ್ವಯಧಿಕಾರಿ ವಿಜಯಪುರ ಇವರ ಸಹಕಾರದೊಂದಿಗೆ, ವಿಜಯಪುರ ಜಿಲ್ಲೆಯ ಶಿಕ್ಷಕರಿಗಾಗಿ ಎರಡು ದಿನಗಳ ವೃತ್ತಿ ಯೋಜನಾ ತರಬೇತಿಯನ್ನು ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆ, ಕಾರಜೋಳ ಶಾಲೆಯಲ್ಲಿ ಆಯೋಜಿಸಲಾಗಿತ್ತು. ಒಟ್ಟು ಒಟ್ಟು 22 ಶಾಲೆಗಳ ಸುಮಾರು 44 ಶಿಕ್ಷಕರು ಭಾಗವಹಿಸಿದ್ದರು.
ವಿಜಯಪುರ ಜಿಲ್ಲೆಯ ಜಿಲ್ಲಾ ಸಮನ್ವಯಧಿಕಾರಿ ರವೀಂದ್ರ ಬಂತನಾಳ, ಕಿತ್ತೂರ ರಾಣಿ ಚೆನ್ನಮ್ಮ ವಸತಿ ಶಾಲೆಯ ಪ್ರಾಂಶುಪಾಲ ಗಂಗಾಧರ ಅಂಕಲಗಿ, ಯುನೈಟೆಡ್ ಎಫರ್ಟ್ಸ್ ಸಂಸ್ಥೆಯ ತರಬೇತಿ ಮುಖ್ಯಸ್ಥ ಅನೀಲ ಕುಮಾರ ಬಿ, ವಿಜಯಪುರ ಜಿಲ್ಲೆಯ ಮೆಂಟರ್ ಲೀಡರ್ ಸಮೇಲ ಗಾಡಿಕಾರ ಅವರು ಸಸಿಗೆ ನೀರು ಹಾಕುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಜಿಲ್ಲಾ ಸಮನ್ವಯಧಿಕಾರಿಗಳಾದ ರವೀಂದ್ರ ಬಂತನಾಳ, ತರಬೇತಿಯ ಮುಖ್ಯಸ್ಥರಾದ ಅನೀಲ ಕುಮಾರ್ ಬಿ ಮಾತನಾಡಿದರು. ಗಂಗಾಧರ ಅಂಕಲಗಿ ಅಧ್ಯಕ್ಷತೆ ವಹಿಸಿದ್ದರು. ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಮಹೇಶ್ ಪೋತರಾಜ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.