
ಕೊಲ್ಹಾರ: ವಿಜಯಪುರ ಜಿಲ್ಲೆಯ ಎಲ್ಲಾ ಚಿತ್ರಮಂದಿರಗಳಲ್ಲಿ ತಮಿಳು ಸಿನಿಮಾ ‘ಥಗ್ ಲೈಫ್’ ಬಿಡುಗಡೆ ಮಾಡಬಾರದೆಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ಕಾರ್ಯಕರ್ತರು ತಹಶೀಲ್ದಾರ್ ಎಸ್.ಎಸ್. ನಾಯಕಲಮಠಗೆ ಗುರುವಾರ ಮನವಿ ಸಲ್ಲಿಸಿದರು.
ವೇದಿಕೆಯ ತಾಲ್ಲೂಕು ಅಧ್ಯಕ್ಷ ರವಿ ಗೊಳಸಂಗಿ ಮಾತನಾಡಿ, ‘ತಮಿಳು ನಟ ಕಮಲ್ ಹಾಸನ್ ಅವರು ಕನ್ನಡ ಹುಟ್ಟಿದ್ದು ತಮಿಳಿನಿಂದ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಕನ್ನಡಿಗರ ಭಾವನೆಗೆ ಧಕ್ಕೆ ಉಂಟು ಮಾಡುವುದಲ್ಲದೆ, ಕನ್ನಡಿಗರು ಹಾಗೂ ತಮಿಳರ ಮಧ್ಯೆ ವಿಷಬೀಜ ಬಿತ್ತಿದ್ದಾರೆ. ಹಾಗಾಗಿ, ಕಮಲ್ ಹಾಸನ್ ನಟನೆಯ ಎಲ್ಲ ಚಿತ್ರಗಳಿಗೂ ಇಲ್ಲಿ ನಿಷೇಧ ಹೇರಬೇಕು’ ಎಂದು ಒತ್ತಾಯಿಸಿದರು.
ಉಪಾಧ್ಯಕ್ಷ ಭೀಮನಗೌಡ ಬಿರಾದಾರ, ತೆಲಗಿ ಗ್ರಾಮ ಘಟಕದ ಅಧ್ಯಕ್ಷ ಚೇತನ ಭಾಮನಿ, ಮಹೇಶ ಪಾಟೀಲ, ಸುನೀಲ ಉಡುಪಿ, ದೀಪಕ ಅಂಗಡಿ, ಶಿವನಗೌಡ ಪಾಟೀಲ, ಹಣಮಂತ ಭಜಂತ್ರಿ, ಕುಂತಿನಾಥ ಮಲಗೊಂಡ, ಮಹೇಶ ಜಾಗಿರದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.